Friday, May 17, 2024
Homeಕರಾವಳಿಪುತ್ತೂರು; ಬಿಜೆಪಿಯೊಂದಿಗೆ ಪುತ್ತಿಲ ಪರಿವಾರ ವಿಲೀನವಾಗೋದು ಬಹುತೇಕ ಖಚಿತ;ನಾಳೆ ಅಧಿಕೃತ ಘೋಷಣೆ ಸಾಧ್ಯತೆ

ಪುತ್ತೂರು; ಬಿಜೆಪಿಯೊಂದಿಗೆ ಪುತ್ತಿಲ ಪರಿವಾರ ವಿಲೀನವಾಗೋದು ಬಹುತೇಕ ಖಚಿತ;ನಾಳೆ ಅಧಿಕೃತ ಘೋಷಣೆ ಸಾಧ್ಯತೆ

spot_img
- Advertisement -
- Advertisement -

ಪುತ್ತೂರು; ಬಿಜೆಪಿಯೊಂದಿಗೆ ಪುತ್ತಿಲ ಪರಿವಾರ ವಿಲೀನವಾಗೋದು ಬಹುತೇಕ ಖಚಿತವಾಗಿದ್ದು ನಾಳೆ ಅಧಿಕೃತವಾಗಿ ಘೋಷಣೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಅರುಣ್ ಕುಮಾರ್ ಪುತ್ತಿಲ ಅವರೊಂದಿಗೆ ಬಿಜೆಪಿ ಹಿರಿಯ ನಾಯಕ ಬಿ ಎಸ್ ಯಡಿಯೂರಪ್ಪ ಮಾತುಕತೆ ನಡೆಸಿದ್ದು ಅದು  ಫಲಪ್ರದವಾಗಿದೆ ಎನ್ನಲಾಗಿದೆ. ಅರುಣ್ ಕುಮಾರ್ ಪುತ್ತಿಲಗೆ ಸೂಕ್ತ ಸ್ಥಾನ ಮಾನ ನೀಡುವ ಭರವಸೆ ನೀಡಲಾಗಿದೆ ಎಂದು ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ.

 ಕೆಲ ದಿನಗಳ ಹಿಂದೆ ಪುತ್ತೂರಿನಲ್ಲಿ ಸಭೆ ಸೇರಿದ್ದ ಪುತ್ತಿಲ ಪರಿವಾರ ಬಿಜೆಪಿ ಜತೆ ವಿಲೀನಕ್ಕೆ ಕೆಲ ಷರತ್ತುಗಳನ್ನು ವಿಧಿಸಿತ್ತು. ಜತೆಗೆ ಮೂರು ದಿನಗಳ ಗಡುವನ್ನು ವಿಧಿಸಲಾಗಿತ್ತು. ಆ ಗಡವು ಗುರುವಾರ ಮುಗಿಯುವುದರೊಳಗೆ ಶುಭ ಸುದ್ದಿಯನ್ನು ಬಿಜೆಪಿ ಹೈಕಮಾಂಡ್‌ ಪುತ್ತಿಲ ಪರಿವಾರಕ್ಕೆ ನೀಡಿದೆ ಎನ್ನಲಾಗಿದ್ದು ಬಿಎಸ್‌ ವೈ ಮಾತಿಗೆ ಪುತ್ತಿಲ ಪರಿವಾರ ಕೂಡ ಒಪ್ಪಿಗೆ ಸೂಚಿಸಿದೆ ಎನ್ನಲಾಗಿದೆ.

ಸದ್ಯದಲ್ಲೇ ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರನ್ನು ಅರುಣ್ ಪುತ್ತಿಲ ಭೇಟಿಯಾಗಲಿದ್ದಾರೆ . ಪುತ್ತಿಲ ಪರಿವಾರ ಬಿಜೆಪಿಯಲ್ಲಿ ವಿಲೀನವಾಗುವ ಮಾಹಿತಿಯನ್ನು ಜಿಲ್ಲಾಧ್ಯಕ್ಷರು ಅಧಿಕೃತವಾಗಿ ಶುಕ್ರವಾರ ಪ್ರಕಟಿಸುವ ಸಾಧ್ಯತೆಯಿದೆ.

- Advertisement -
spot_img

Latest News

error: Content is protected !!