ಹೈದರಾಬಾದ್: ಧಿಡೀರ್ ಆಗಿ ಚಿಕ್ಕಡಪಲ್ಲಿ ಪೊಲೀಸರಿಂದ ಸಂಧ್ಯಾ ಥಿಯೇಟರ್ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾದ ನಟ ಅಲ್ಲು ಅರ್ಜುನ್ ಅವರು ಇದೀಗ ಜೈಲಿಗೆ ಶಿಫ್ಟ್ ಆಗಲಿದ್ದಾರೆ ಎಂದು ತಿಳಿದು ಬಂದಿದೆ.
ಈಗಾಗಲೇ ನಟನನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿದ ಪೊಲೀಸರು ಹೈದರಾಬಾದ್ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್ 14 ದಿನ ನ್ಯಾಯಾಂಗ ಬಂಧನ ವಿಧಿಸಿದೆ ಎನ್ನಲಾಗಿದೆ.
ಇನ್ನು ಅಲ್ಲು ಅರ್ಜುನ್ ಅವರನ್ನು ಕೋರ್ಟ್ ಆದೇಶದ ಬೆನ್ನಲ್ಲೇ ಚಂಚಲಗೂಡ ಜೈಲಿಗೆ ಶಿಫ್ಟ್ ಮಾಡಲಾಗುತ್ತದೆ.
ಈ ಮೊದಲೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹೈದರಾಬಾದ್, ಚಿಕ್ಕಡಪಲ್ಲಿ ಪೊಲೀಸರು ನಟನಿಗೆ ನೊಟೀಸ್ ನೀಡಿದ್ದರೂ, ಉತ್ತರ ಬಂದಿರಲಿಲ್ಲ. ಈ ಕಾರಣಕ್ಕಾಗಿ ನಟನನ್ನು ಬಂಧಿಸಲಾಗಿದೆ. ಈಗಾಗಲೇ ಅಲ್ಲು ಅರ್ಜುನ್ ಈ ಪ್ರಕರಣವನ್ನು ರದ್ದು ಮಾಡುವಂತೆ ತೆಲಂಗಾಣ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದರು.
‘ಪುಷ್ಪ 2’ ಪ್ರೀಮಿಯರ್ ಶೋ ಅನ್ನು ಡಿ.4ರಂದು ಸಂಧ್ಯಾ ಥಿಯೇಟರ್ ಹಮ್ಮಿಕೊಂಡಿದ್ದು, ನಟ ಕೂಡ ಚಿತ್ರಮಂದಿರಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅಭಿಮಾನಿಗಳ ನೂಕು ನುಗ್ಗಲಿನಿಂದಾಗು ಕಾಲ್ತುಳಿತ ಸಂಭವಿಸಿದ್ದು, ಓರ್ವ ಮಹಿಳೆ ಮತ್ತು ಆತನ ಮಗನಿಗೆ ಗಂಭೀರವಾಗಿ ಏಟಾಗಿತ್ತು. ಘಟನೆಯಲ್ಲಿ ತಾಯಿ ಮೃತಪಟ್ಟಿದ್ದಾರೆ.