Thursday, January 16, 2025
HomeUncategorizedಅಪರಿಚಿತ ದೂರವಾಣಿ ಸಂಖ್ಯೆಯಿದ ಕರೆ ಬಂದರೆ ಎಚ್ಚರ..!; ಕರೆ ಸ್ವೀಕರಿಸಿದ ಕೂಡಲೇ ಹಣ ವರ್ಗಾವಣೆ

ಅಪರಿಚಿತ ದೂರವಾಣಿ ಸಂಖ್ಯೆಯಿದ ಕರೆ ಬಂದರೆ ಎಚ್ಚರ..!; ಕರೆ ಸ್ವೀಕರಿಸಿದ ಕೂಡಲೇ ಹಣ ವರ್ಗಾವಣೆ

spot_img
- Advertisement -
- Advertisement -

ಉಪ್ಪಿನಂಗಡಿ: ದಿನದಿಂದ ದಿನಕ್ಕೆ ಸೈಬರ್‌ ವಂಚನೆಗಳು ಹೆಚ್ಚಾಗುತ್ತಿದ್ದು, ವಂಚಕರು ಕೂಡ ಹಣ ದೋಚಲು ಹೊಸ ಹೊಸ ತಂತ್ರಗಳನ್ನು ಹುಡುಕುತ್ತಿದ್ದಾರೆ. ಇದೀಗ ಜನರನ್ನ ಗಾಬರಿಗೊಳಿಸುವ ಮತ್ತೊಂದು ತಂತ್ರವನ್ನು ವಂಚಕರು ಉಪ್ಪಿನಂಗಡಿಯ ವ್ಯಕ್ತಿಯ ಮೇಲೆ ಪ್ರಯೋಗಿಸಿದ್ದು, ಪೋನ್ ಕರೆಯನ್ನು ಸ್ವೀಕರಿಸಿದ ತಕ್ಷಣ ಅವರ ಖಾತೆಯಿಂದ ಹಣ ವರ್ಗಾವಣೆಯಾಗಿದೆ.

ಗುರುವಾರ ಮುಂಜಾನೆ ಅಪರಿಚಿತ ಸಂಖ್ಯೆಯಿಂದ ಉಪ್ಪಿನಂಗಡಿಯ ಮಾಧ್ಯಮ ಪ್ರತಿನಿಧಿಯೋರ್ವರಿಗೆ ಪೋನ್‌ ಕರೆ ಬಂದಿದ್ದು, ಕರೆಯನ್ನು ಸ್ವೀಕರಿಸಿದ ಕೂಡಲೇ ಕರೆ ಕಡಿತಗೊಂಡಿದೆ. ಇನ್ನು ಇದರ ಬೆನ್ನಲ್ಲೇ ಈ ದೂರವಾಣಿ ಸಂಖ್ಯೆ ಜೋಡಣೆ ಆಗಿದ್ದ ಬ್ಯಾಂಕಿನ ಖಾತೆಯಿಂದ ಹಣವರ್ಗಾವಣೆಯಾಗಿರುವ ಬಗ್ಗೆ ಸಂದೇಶ ಬಂದಿತ್ತು ಎನ್ನಲಾಗಿದೆ.

ಈ ಕುರಿಂತೆ ಸಂಬಂಧಿಸಿದ ಬ್ಯಾಂಕ್ ಗೆ ದೂರು ಸಲ್ಲಿಸಿದಾಗ, 161 ರೂ. ವರ್ಗಾವಣೆಗೊಂಡಿದ್ದು ತಿಳಿದು ಬಂದಿದೆ. ಅದೃಷ್ಟಾವಶತ್ ಸಮರ್ಪಕ ಬ್ಯಾಲೆನ್ಸ್‌ ಇಲ್ಲದ ಕಾರಣ 14,839 ರೂ. ವರ್ಗಾವಣೆ ಆಗಿಲ್ಲ ಎನ್ನಲಾಗಿದೆ.   

ಇನ್ನು ಸ್ವಲ್ಪ ಸಮಯದ ನಂತರ ಅದೇ ಸಂಖ್ಯೆಯಿಂದ ಮತ್ತೊಂದು ಕರೆ ಬಂದಿದ್ದು, ಅದನ್ನು ಸ್ವೀಕರಿಸಲಿಲ್ಲ. ಕರೆ ಬಂದ ಪೋನ್‌ ನಂಬರ್‌ 68778220051 ಎನ್ನಲಾಗಿದೆ.

ಘಟನೆಯ ಬಗ್ಗೆ ಸೈಬರ್‌ ಕ್ರೈಂ ವಿಭಾಗದ ಪೊಲೀಸರಿಗೆ ಸೂಕ್ರ ಕ್ರಮ ಕೈಗೊಳ್ಳುವಂತೆ ದೂರು ಸಲ್ಲಿಸಲಾಗಿದೆ.

- Advertisement -
spot_img

Latest News

error: Content is protected !!