ಧರ್ಮಸ್ಥಳ: ಕರೋನಾ ಸಮಸ್ಯೆಯಿಂದ ರಾಜ್ಯದಲ್ಲಿ ಎಲ್ಲ ವ್ಯವಹಾರಗಳು ಸ್ಥಗಿತಗೊಂಡಿದ್ದರೂ, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಶುದ್ಧ ಕುಡಿಯುವ ನೀರಿನ “ಶುದ್ಧಗಂಗಾ” ಕಾರ್ಯಕ್ರಮ ಗ್ರಾಮಸ್ಥರಿಗೆ ತನ್ನ ಸೇವೆಯನ್ನು ಮುಂದುವರೆಸುತ್ತಿದೆ. ರಾಜ್ಯದ ಹದಿನೆಂಟು ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 275 ಶುದ್ಧಗಂಗಾ ಘಟಕಗಳು, ಪ್ರತಿನಿತ್ಯ 71 ಸಾವಿರ ಕುಟುಂಬಗಳಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುತ್ತಿದೆ.
ಪ್ರತಿನಿತ್ಯ ಕುಟುಂಬವೊಂದಕ್ಕೆ ಪರಿಷ್ಕರಿಸಿದ 20 ಲೀಟರ್ ನೀರನ್ನು ಒದಗಿಸಲಾಗುತ್ತಿದೆ. ಇದಕ್ಕಾಗಿ ಹೆಚ್ಚಿನ ಘಟಕಗಳನ್ನು ಯಾಂತ್ರೀಕೃತಗೊಳಿಸಿ, ಮಾನವ ನಿರ್ವಹಣಾ ರಹಿತ ಘಟಕಗಳನ್ನಾಗಿ ಮಾಡಲಾಗಿದೆ. ದಿನವೊಂದಕ್ಕೆ ಸುಮಾರು 14 ಲಕ್ಷ ಲೀಟರ್ ಶುದ್ಧೀಕರಿಸಿದ ನೀರನ್ನು ಜನರು ಒಯ್ಯುತ್ತಿದ್ದಾರೆ. ಇದಕ್ಕಾಗಿ 325 ಜನ ಕಾರ್ಯಕರ್ತರು ಕೆಲಸ ನಿರ್ವಹಿಸುತ್ತಿದ್ದು ತಮ್ಮ ತಮ್ಮ ಪಂಚಾಯತ್ ಗಳಿಂದ ಕೆಲಸ ನಿರ್ವಹಣೆಯ ಅನುಮತಿಯನ್ನು ಪಡೆದಿದ್ದಾರೆ.
ಗ್ರಾಹಕರ ನಡುವೆ ಅಂತರ ಕಾಯ್ದುಕೊಳ್ಳುವ ದೃಷ್ಠಿಯಿಂದ, ಗ್ರಾಹಕರಿಗೆ ನಿಲ್ಲಲು ಗುರುತು ಮಾಡಿದ್ದು, ಪ್ರತಿಯೊಬ್ಬರು ದೂರದಿಂದಲೇ ಕೆಲಸ ನಿರ್ವಹಿಸುವ ವ್ಯವಸ್ಥೆಯನ್ನು ಮಾಡಲಾಗಿದೆ. ಪೂಜ್ಯ ವೀರೇಂದ್ರ ಹೆಗಡೆಯವರ ಮಾರ್ಗದರ್ಶನದಂತೆ ಎಲ್ಲ ಘಟಕಗಳು ಸುಸ್ಥಿರವಾಗಿ ಕಾರ್ಯನಿರ್ವಹಿಸುವಂತೆ ವ್ಯವಸ್ಥೆ ಮಾಡಲಾಗಿದ್ದು, ಸಣ್ಣಪುಟ್ಟ ಯಂತ್ರದ ದೋಷಗಳನ್ನು ಸ್ಥಳೀಯ ಮೆಕ್ಯಾನಿಕ್‌ಗಳಿಂದಲೇ ಸರಿಪಡಿಸಿಕೊಳ್ಳಲಾಗುತ್ತಿದೆ. ಬಳಕೆದಾರರಿಗೆ ತೊಂದರೆಯಾಗದಂತೆ, ತಮ್ಮ ಘಟಕಗಳನ್ನು ನಿರ್ವಹಿಸುತ್ತಿರುವ ಕಾರ್ಯಕರ್ತರ ಬಗ್ಗೆ ಜನರಿಂದ ಬಹಳಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ ಎಂದು ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ| ಎಲ್. ಎಚ್. ಮಂಜುನಾಥ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಶುದ್ಧ ಕುಡಿಯುವ ನೀರು
- Advertisement -
- Advertisement -
- Advertisement -