- Advertisement -
- Advertisement -
ಬೆಳಾಲು: ಇಡೀ ಜಗತ್ತನ್ನೇ ಕಾಡುತ್ತಿರುವ ಮಾರಕ ಕೊರೋನಾ ವೈರಸ್ ಸೋಂಕು ನಾಗರಿಕ ಸಮಾಜವನ್ನೇ ದಂಗುಬಡಿಸಿದೆ. ಇದರಿಂದಾಗಿ ಇಡೀ ದೇಶವೇ ಲಾಕ್ ಡೌನ್ ಘೊಷಣೆ ಮಾಡಿದೆ. ಬಂದ್ ನಿಂದಾಗಿ ಅದೆಷ್ಟೋ ಕುಟುಂಬಗಳು ಬಹಳ ಕಷ್ಟದ ಜೀವನ ನಡೆಸುತ್ತಿದೆ.ಇದನ್ನು ಗಮನದಲ್ಲಿಟ್ಟುಕೊಂಡು ಬೆಳ್ತಂಗಡಿ ತಾಲೂಕಿನ ಮೇಲಂತಬೆಟ್ಟು ಶ್ರೀ ದೇವಿ ಹಾಗೂ ಮಾರಣ ಗುಳಿಗ ಕಟ್ಟೆ ಸ್ಥಾಪನ ಸಮಿತಿಯ ವತಿಯಿಂದ ಪರಿಸರದ ಅರ್ಹ ಫಲಾನುಭವಿಗಳಿಗೆ ದಿನಸಿ ವಸ್ತುಗಳ ವಿತರಣೆ ಕಾರ್ಯ ಇಂದು ಸಂಜೆ ನಡೆಯಿತು.
ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷರು ಆಗಿರುವ ಸಚಿನ್ ಕುಮಾರ್ ನೂಜೊಡಿ ಹಾಗೂ ಹಿರಿಯರು ಆಗಿರುವಂತಹ ಪ್ರಮೋದ್ ಕುಮಾರ್ ನೂಜೋಡಿ, ಸುರೇಶ್ ಶೆಟ್ಟಿ ಮಾಪಲಾಡಿ, ಸುರೇಶ್ ಶೆಟ್ಟಿ, ನಾರಾಯಣ ಪೂಜಾರಿ ಬರಮೇಲು, ಡಾ. ಸೋಹನ್ ಕುಮಾರ್ ನೂಜೋಡಿ, ತುಳಸಿ ಪ್ರಸಾದ್ ಬೆಳಾಲ್, ಅಶೋಕ್ ಕೊಟ್ಟಾರಿ ವಳಚಿಲ್ ಮತ್ತು ಬಾಬು ಗೋಳಿದಪಲ್ಕೆ ಇತರರು ಸ್ಥಳದಲ್ಲಿ ಉಪಸ್ಥಿತರಿದ್ದರು.
- Advertisement -