- Advertisement -
- Advertisement -
ಮಂಗಳೂರು.ಎ 06: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಭೀತಿ ನಡುವೆಯೂ ಇದೀಗ ನಾಲ್ವರು ಕೊರೊನಾ ಪೀಡಿತರು ಗುಣಮುಖರಾಗಿದ್ದು ಇಂದು ಜಿಲ್ಲಾ ಆಸ್ಪತ್ರೆ ವೆನ್ಲಾಕ್ ಯಿಂದ ಬಿಡುಗಡೆ ಹೊಂದಿದ್ದಾರೆ. ಜಿಲ್ಲೆಯ ಜನತೆಯ ಮಟ್ಟಿಗೆ ಇದೊಂದು ಆಶಾದಾಯಕ ಬೆಳವಣಿಗೆಯಾಗಿದೆ.
ಸೋಂಕಿತರ 12 ಮಂದಿಯ ಪೈಕಿ ನಾಲ್ವರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇನ್ನು ಉಳಿದ 8 ಮಂದಿಯ ಚಿಕಿತ್ಸೆ ಮುಂದುವರಿದಿದ್ದು , ಇವರು ಕೂಡಾ ಶೀಘ್ರ ಗುಣಮುಖರಾಗುವ ವಿಶ್ವಾಸವಿದೆ ಎಂದು ಆಸ್ಪತ್ರೆಯ ವೈದ್ಯಕೀಯ ತಂಡ ತಿಳಿಸಿದೆ.
ಸೋಂಕಿತರ ಪೈಕಿ ಒರ್ವ ಭಟ್ಕಳ,ಮೂರು ಮಂದಿ ಕಾಸರಗೋಡು ನಿವಾಸಿಗಳಾಗಿದ್ದು, ಡಿಸ್ಚಾರ್ಜ್ ವೇಳೆ ಕೈಗೆ ಸೀಲ್ ಹಾಕಿ 28 ದಿನ ಕಡ್ಡಾಯ ಹೋಮ್ ಕ್ವಾರಂಟೈನ್ ನಲ್ಲಿ ಇರುವಂತೆ, ಇವರೆಲ್ಲಾರಿಗೂ ಸೂಚನೆ ನೀಡಲಾಗಿದೆ.
- Advertisement -