- Advertisement -
- Advertisement -
ಪುಂಜಾಲಕಟ್ಟೆ: ಕೋವಿಡ್19 ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಲಾಕ್ ಡೌನ್ ಮಾಡಲಾಗಿದ್ದರು ಕೂಡಾ ವಾಹನ ಸವಾರರು ಮಾತ್ರ ರಸ್ತೆಗಿಳಿಯುವುದು ತಪ್ಪಿಲ್ಲ.
ಅಗತ್ಯ ವಸ್ತುಗಳ ಪಡೆಯಲು ಜಿಲ್ಲಾಡಳಿತ ಬೆಳಿಗ್ಗೆ 7ರಿಂದ ಮಧ್ಯಾಹ್ನ 12 ಗಂಟೆಯ ವರಗೆ ಅವಕಾಶ ನೀಡಿದೆ ಆದರೆ ಜನರು ಮಾತ್ರ ಇದರ ದುರ್ಬಳಕೆ ಮಾಡಿಕೊಂಡು ಅನಗತ್ಯವಾಗಿ ತಿರುಗಾಟ ನಡೆಸುತ್ತಿದ್ದಾರೆ. ಪೋಲೀಸರು ಪದೇ ಪದೇ ಎಚ್ಚರಿಕೆ ನೀಡಿದರು ಜನ ಮಾತ್ರ ಅರ್ಥ ಮಾಡಿಕೊಂಡಿಲ್ಲ. ಪ್ರತಿನಿತ್ಯ ಪೋಲೀಸರು ಅಂತಹ ವಾಹನ ಸವಾರರಿಗೆ ಎಚ್ಚರಿಕೆ ನೀಡುವುದರ ಜೊತೆಗೆ ದಂಡ ವಸೂಲಿ ಮಾಡುತ್ತಿದ್ದಾರೆ.
ಇಂದು ಬೆಳಿಗ್ಗೆಯೇ ರಸ್ತೆಗಿಳಿದು ಅಂತಹ ವಾಹನಗಳನ್ನು ತಡೆದ ಎಸ್.ಐ ಸೌಮ್ಯ ವಾಹನ ಸವಾರರಿಗೆ ಬಿಸಿ ಮುಟ್ಟಿಸಿದ್ದಾರೆ.
- Advertisement -