- Advertisement -
- Advertisement -
ಬೆಳ್ತಂಗಡಿ ಏ-02: ಕೊರೊನಾ ಹಿನ್ನಲೆಯಲ್ಲಿ ಸರಕಾರದ ಆದೇಶದಂತೆ ಮುಂಜಾಗ್ರತ ಕ್ರಮವಾಗಿ ಲಾಕ್ ಡೌನ್ ಬಿಗಿಗೊಳಿಸಲು ಅನಗತ್ಯವಾಗಿ ಮಡಂತ್ಯಾರು, ವಾಮದಪದಪು ಹಾಗೂ ಪುಂಜಾಲಕಟ್ಟೆ ಪೇಟೆಯಲ್ಲಿ ಸುತ್ತಾಡುತ್ತಿಡ್ಡ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದು ಕೇಸು ದಾಖಲಿಸಿಕೊಂಡಿದ್ದಾರೆ.
ಜಿಲ್ಲಾ ಆದೇಶದಂತೆ ಬೆಳಿಗ್ಗೆ 06 ರಿಂದ ಮದ್ಯಾಹ್ನ 12 ಗಂಟೆಯವರೆಗೆ ನಾಗರಿಕರಿಗೆ ದಿನ ನಿತ್ಯ ವಸ್ತುಗಳ ಖರೀದೀಗೆ ಪೇಟೆಗಳಿಗೆ ಬರಲು ಅವಕಾಶವಿದೆ. ಆದರೆ ಮಧ್ಯಾಹ್ನದ ನಂತರವೂ ಅನಗತ್ಯವಾಗಿ ರಸ್ತೆಯಲ್ಲಿ ಸುತ್ತಾಡುತ್ತಿದ್ದ 12 ದ್ವಿಚಕ್ರ ವಾಹನ, ಒಂದು ಆಟೋ ಹಾಗೂ ಒಂದು ಪಿಕಪ್ ವಾಹನವನ್ನು ಪುಂಜಾಲಕಟ್ಟೆ ಪೊಲೀಸ್ ಠಾಣೆಯ ಎಸ್ಐ ಸೌಮ್ಯ ಮತ್ತು ಅವರ ತಂಡ ಇಂದು ಮಡಂತ್ಯಾರು, ವಾಮದಪದಪು ಹಾಗೂ ಪುಂಜಾಲಕಟ್ಟೆ ಪರಿಸರದಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ.
- Advertisement -