Friday, June 2, 2023
Homeಉದ್ಯಮಲಾಕ್ ಡೌನ್ ನಡುವೆಯೂ ಈ ತಿಂಗಳಿನಲ್ಲಿ 12 ದಿನ ಬ್ಯಾಂಕ್ ರಜೆ

ಲಾಕ್ ಡೌನ್ ನಡುವೆಯೂ ಈ ತಿಂಗಳಿನಲ್ಲಿ 12 ದಿನ ಬ್ಯಾಂಕ್ ರಜೆ

- Advertisement -
- Advertisement -

ನವದೆಹಲಿ: ಕೋರೋನಾ ಸೋಂಕು ತಡೆಗೆ ದೇಶಾದ್ಯಂತ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಹೀಗಿದ್ದರೂ ದೇಶಾದ್ಯಂತ ಬ್ಯಾಂಕುಗಳು ಕಾರ್ಯ ನಿರ್ವಹಿಸುತ್ತಿವೆ. ಸದ್ಯ ಲಾಕ್ ಡೌನ್ ಜಾರಿಯಲ್ಲಿರುವುದರಿಂದ ಬ್ಯಾಂಕು ಕಾರ್ಯನಿರ್ವಹಿಸುವ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ಏಪ್ರಿಲ್ ತಿಂಗಳಲ್ಲಿ ಬ್ಯಾಂಕುಗಳಿಗೆ ಬರೋಬ್ಬರಿ 12 ದಿನ ರಜೆ ಇರುತ್ತದೆ.

  • ಏಪ್ರಿಲ್ 5 ಭಾನುವಾರ
  • ಏಪ್ರಿಲ್ 6 ಸೋಮವಾರ -ಮಹಾವೀರ ಜಯಂತಿ
  • ಏಪ್ರಿಲ್ 10 ಶುಕ್ರವಾರ -ಗುಡ್ ಫ್ರೈಡೆ
  • ಏಪ್ರಿಲ್ 11 ಎರಡನೇ ಶನಿವಾರ ಬ್ಯಾಂಕ್ ರಜೆ
  • ಏಪ್ರಿಲ್ 12 ಭಾನುವಾರ
  • ಏಪ್ರಿಲ್ 13 ಸೋಮವಾರ -ಬಿಜು ಉತ್ಸವ, ಬೈಸಾಕಿ
  • ಏಪ್ರಿಲ್ 14 ಮಂಗಳವಾರ -ಅಂಬೇಡ್ಕರ್ ಜಯಂತಿ
  • ಏಪ್ರಿಲ್ 15 ಬುಧವಾರ -ಬೋಹಾಗ್ ಬಿಹು
  • ಏಪ್ರಿಲ್ 19 ಭಾನುವಾರ
  • ಏಪ್ರಿಲ್ 20 ಸೋಮವಾರ ಗರಿಯಾ ಪೂಜೆ
  • ಏಪ್ರಿಲ್ 25 ನಾಲ್ಕನೇ ಶನಿವಾರ ಬ್ಯಾಂಕ್ ರಜೆ
  • ಏಪ್ರಿಲ್ 26 ಭಾನುವಾರ

ಭಾರತೀಯ ರಿಸರ್ವ್ ಬ್ಯಾಂಕ್ ಮಾಹಿತಿಯಂತೆ ಏಪ್ರಿಲ್ ನಲ್ಲಿ 12 ದಿನ ರಜೆ ಇರುತ್ತದೆ. ಆಯಾ ರಾಜ್ಯಗಳು, ಪ್ರದೇಶಗಳಿಗೆ ಅನುಗುಣವಾಗಿ ರಜೆ ಬದಲಾಗುವ, ಕಡಿತವಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಲಾಕ್ ಡೌನ್ ನಿಂದಾಗಿ ಬ್ಯಾಂಕ್ ಕೆಲಸದ ಅವಧಿ ಸಮಯ ಬದಲಾಗಿದೆ.

- Advertisement -

Latest News

error: Content is protected !!