Saturday, August 20, 2022
Homeಕರಾವಳಿ10 ವರ್ಷ ಕಾಮಗಾರಿ ಮಾಡಿರೋ ಪಂಪ್ವೆಲ್​ ಮೇಲ್ಸೇತುವೆಯಲ್ಲಿ ಬಿರುಕು, ವಾಹನ ಸವಾರರಲ್ಲಿ ಆತಂಕ!

10 ವರ್ಷ ಕಾಮಗಾರಿ ಮಾಡಿರೋ ಪಂಪ್ವೆಲ್​ ಮೇಲ್ಸೇತುವೆಯಲ್ಲಿ ಬಿರುಕು, ವಾಹನ ಸವಾರರಲ್ಲಿ ಆತಂಕ!

- Advertisement -
- Advertisement -

ಮಂಗಳೂರು: ರಾಷ್ಟ್ರೀಯ ಹೆದ್ದಾರಿ 66ರ ಕಾಸರಗೋಡು-ಉಡುಪಿ ರಸ್ತೆಯ ಪಂಪ್‌ವೆಲ್‌ ಮೇಲ್ಸೇತುವೆ 3 ತಿಂಗಳ ಹಿಂದೆಯಷ್ಟೇ ಉದ್ಘಾಟನೆಗೊಂಡಿದ್ದು, ಇದೀಗ ಮೇಲ್ಸೇತುವೆಯ ಮಧ್ಯಭಾಗದ ಎರಡು ರಸ್ತೆ ಹಾಗೂ ತಡೆಗೋಡೆ ಉದ್ದಕ್ಕೆ ಬಿರುಕು ಬಿಟ್ಟಿದ್ದು, ವಾಹನ ಸವಾರರನ್ನು ಆತಂಕಕ್ಕೀಡು ಮಾಡಿದೆ.

600 ಮೀ. ಉದ್ದ ಹಾಗೂ 20 ಮೀ. ಅಗಲವಿರುವ ಈ ಫ್ಲೈಓವರ್‌ ಕರ್ಣಾಟಕ ಬ್ಯಾಂಕ್‌ ಪ್ರಧಾನ ಕಚೇರಿಯಿಂದ ಇಂಡಿಯಾನ ಆಸ್ಪತ್ರೆ ಮುಂಭಾಗದವರೆಗೆ ನಿರ್ಮಾಣವಾಗಿದೆ. ಇಷ್ಟು ಉದ್ದದ ಮೇಲ್ಸೇತುವೆ 10 ವರ್ಷಗಳಿಂದ ಕುಂಟುತ್ತಾ ಸಾಗಿ ಸಾರ್ವಜನಿಕರಿಂದ ಭಾರೀ ವಿರೋಧ ವ್ಯಕ್ತವಾಗಿತ್ತು.

ಸುಮಾರು ವರ್ಷಗಳಿಂದ ಭಾರೀ ಚರ್ಚೆಗೆ ಕಾರಣವಾಗಿದ್ದ ಪಂಪ್‌ವೆಲ್‌ ಮೇಲ್ಸೇತುವೆಯಲ್ಲಿ ಶನಿವಾರ ಮುಂಜಾನೆ ಮಳೆ ಸುರಿದ ಬಳಿಕ ಬಿರುಕು‌ ಕಾಣಿಸಿಕೊಂಡಿದೆ.

ಲಾಕ್‌ಡೌನ್‌ ಕಾರಣದಿಂದಾಗಿ ಮೇಲ್ಸೇತುವೆಯ ಮೇಲೆ ವಾಹನ ಸಂಚಾರ ಇಳಿಕೆಯಾಗಿದ್ದು ಲಾಕ್‌ಡೌನ್‌ ತೆರವಿನ ಬಳಿಕ ಬಿರುಕುಗೊಂಡ ಮೇಲ್ಸೇತುವೆಯ ಮೇಲೆ ವಾಹನ ಸಂಚಾರ ಅಪಾಯಕ್ಕೆ ಕಾರಣವಾಗಬಹುದು. ಅವೈಜ್ಞಾನಿಕವಾದ ಕಾಮಗಾರಿಯೇ ಮೇಲ್ಸೇತುವೆಯಲ್ಲಿ ಬಿರುಕು ಕಾಣಿಸಿಕೊಳ್ಳಲು ಕಾರಣ ಎಂದು ಹೇಳಲಾಗುತ್ತಿದೆ.

2017ರಲ್ಲೂ ಗರ್ಡರ್‌ನಲ್ಲಿ ಬಿರುಕು
2017ರ ಅಕ್ಟೋಬರ್‌ನಲ್ಲಿ ಫ್ಲೈಓವರ್‌ನ ಗರ್ಡರ್‌(ಕಾಂಕ್ರೀಟ್‌ನ ಉದ್ದದ ಸ್ತಂಭ)ನಲ್ಲಿ ಬಿರುಕು ಕಾಣಿಸಿಕೊಂಡಿತ್ತು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದಾಗ, ಒಂದು ಗರ್ಡರ್‌ನಲ್ಲಿ ಬಿರುಕು ಇರುವುದನ್ನು ಪತ್ತೆ ಹಚ್ಚಿದ್ದರು. ಗರ್ಡರ್‌ ಜೋಡಿಸುವಾಗ ಆದ ಎಡವಟ್ಟಿನಿಂದಾಗಿ ಈ ಬಿರುಕು ಕಾಣಿಸಿಕೊಂಡಿತ್ತು. ಅಧಿಕಾರಿಗಳ ಸೂಚನೆ ಮೇರೆಗೆ ಹಿಟಾಚಿ ನೆರವಿನೊಂದಿಗೆ ಗರ್ಡರ್‌ ತೆರವು ಮಾಡಿ ಹೊಸ ಗರ್ಡರ್‌ ಅಳವಡಿಕೆ ಮಾಡಲಾಗಿತ್ತು.

- Advertisement -
- Advertisment -

Latest News

error: Content is protected !!