- Advertisement -
- Advertisement -
ಬೆಳ್ತಂಗಡಿ : ಕೋವಿಡ್ 19 ಲಾಕ್ ಡೌನ್ ಕಾರಣದಿಂದ ಸಾಮಾನ್ಯ ಜನರಿಗೆ ಜೀವನ ನಡೆಸುವುದು ಸವಾಲಾಗಿ ಪರಿಣಮಿಸಿದೆ ಇಂತಹ ಸಂಧರ್ಭದಲ್ಲಿ ಸಮಾಜದ ಸಹಾಯ ಬಹಳ ಮುಖ್ಯ. ಬೆಳ್ತಂಗಡಿ ತಾಲೂಕು ಬಂದಾರು ಗ್ರಾಮ ಪಂಚಾಯತ್ ವಠಾರದಲ್ಲಿ ಎ.26 ರಂದು ಶಾಸಕರ ಶ್ರಮಿಕ ನೆರವಿನ ಕಿಟ್, ಊರಿನ ದಾನಿಗಳ ಮತ್ತು ಸಂಘ ಸಂಸ್ಥೆಗಳ ಸಹಕಾರದಿಂದ ಅರ್ಹ 170 ಕುಟುಂಬಗಳಿಗೆ ಕಿಟ್ ವಿತರಣಾ ಕಾರ್ಯಕ್ರಮವು ಬಹಳ ಯಶಶ್ವೀಯಾಗಿ ನಡೆಯಿತು. ಈ ಮಹತ್ಕಾರ್ಯಕ್ಕೆ ಸಹಕರಿಸಿದ ಎಲ್ಲರಿಗೂ ಸಂಘಟಕರು ಕೃತಜ್ಞತೆ ಸಲ್ಲಿಸಿದ್ದಾರೆ .
ಈ ಸಂದರ್ಭದಲ್ಲಿ ಗ್ರಾಮ ಪಂ ಅಧ್ಯಕ್ಷ ಉದಯ ಬಿ.ಕೆ,ತಾಲೂಕು ಪಂ ಸದಸ್ಯ ಕೃಷ್ಣಯ್ಯ ಆಚಾರ್ಯ,ಸಿ.ಎ ಬ್ಯಾಂಕ್ ನಿರ್ದೇಶಕ ಅಶೋಕ ಪಿ, ರಾಮಣ್ಣ ಸಾಲಿಯನ್,ಬೂತ್ ಸಮಿತಿ ಅಧ್ಯಕ್ಷರ ಚೇತನ್,ದೇವಸ್ಥಾನದ ಕಾರ್ಯದರ್ಶಿ ಉಮೇಶ ಪಿ,ಜೈ ಶ್ರಿ ರಾಮ್ ಗೆಳಯ ಬಳಗದ ಕಾರ್ಯದರ್ಶಿ ಶ್ರೀಧರ ಬಿ ಕೆ ಸದಸ್ಯರಾದ ಚಂದ್ರಹಾಸ,ಪ್ರಕಾಶ ಕೆ,ನಾಗಶ್ರೀ ಗೆಳೆಯರ ಬಳಗದ ಶ್ರೀಧರ ಗೌಡ ಮೊದಲಾದವರು ಉಪಸ್ಥಿತರಿದ್ದರು .
- Advertisement -