Wednesday, May 15, 2024
Homeತಾಜಾ ಸುದ್ದಿಭಾರತದ ಕೋವಿಡ್ ಸಾವಿನ ಚಿತ್ರಗಳನ್ನು ತೆಗೆದಿದ್ದ ದ್ಯಾನಿಶ್ ಸಿದ್ದಿಕಿಗೆ ಪುಲಿಟ್ಜರ್ ಪ್ರಶಸ್ತಿ

ಭಾರತದ ಕೋವಿಡ್ ಸಾವಿನ ಚಿತ್ರಗಳನ್ನು ತೆಗೆದಿದ್ದ ದ್ಯಾನಿಶ್ ಸಿದ್ದಿಕಿಗೆ ಪುಲಿಟ್ಜರ್ ಪ್ರಶಸ್ತಿ

spot_img
- Advertisement -
- Advertisement -

ವಾಷಿಂಗ್ಟನ್: ಪತ್ರಿಕೋದ್ಯಮ, ಪುಸ್ತಕ, ನಾಟಕ ಮತ್ತು ಸಂಗೀತದ ಪುಲಿಟ್ಜರ್ ಪ್ರಶಸ್ತಿ 2022ರ ವಿಜೇತರ ಹೆಸರನ್ನು ಪ್ರಕಟಿಸಲಾಗಿದೆ. ಪತ್ರಿಕೋದ್ಯಮದಲ್ಲಿನ ಅತ್ಯುನ್ನತ ಪ್ರಶಸ್ತಿ ಎಂದು ಗುರುತಿಸಲಾಗಿರುವ ಪುಲಿಟ್ಜರ್ ಅವಾರ್ಡ್‌ ಪಡೆದವರಲ್ಲಿ ಭಾರತೀಯರಾದ ಅದ್ನಾನ್ ಅಬಿದಿ, ಸನ್ನಾ ಇರ್ಷಾದ್ ಮಟ್ಟೂ, ಅಮಿತ್ ದೇವ್ ಮತ್ತು ದ್ಯಾನಿಶ್‌ ಸಿದ್ದಿಕಿ ಸೇರಿದ್ದಾರೆ.

ಭಾರತದಲ್ಲಿ ಕೋವಿಡ್ ಮರಣದ ಚಿತ್ರಗಳನ್ನು ತೆಗೆದಿದ್ದ ರಾಯಿಟರ್ಸ್‌ನ ಛಾಯಾಗ್ರಾಹಕ ದ್ಯಾನಿಶ್ ಸಿದ್ದಿಕಿ ಅವರಿಗೆ ಮರಣೋತ್ತರವಾಗಿ ಪುಲಿಟ್ಜರ್ ನೀಡಲಾಗಿದೆ. ಕಳೆದ ವರ್ಷ ಅಫ್ಘಾನಿಸ್ತಾನ ವಿಶೇಷ ಪಡೆಗಳು ಮತ್ತು ತಾಲಿಬಾನ್ ಉಗ್ರರ ನಡುವಿನ ಯುದ್ಧದ ವರದಿಗಾರಿಕೆಗೆ ತೆರಳಿದ್ದ ಸಂದರ್ಭದಲ್ಲಿ ತಾಲಿಬಾನ್ ಗುಂಡೇಟಿಗೆ ದ್ಯಾನಿಶ್ ಸಿದ್ದಿಕಿ ಮೃತಪಟ್ಟಿದ್ದರು.

ಭಾರತದಲ್ಲಿನ ಕೋವಿಡ್ ಸಂದರ್ಭದ ಸಾವಿನ ಚಿತ್ರಗಳಿಗಾಗಿಯೇ ಅದ್ನಾನ್ ಅಬಿದಿ, ಸನ್ನಾ ಇರ್ಷಾದ್ ಮಟ್ಟೂ, ಅಮಿತ್ ದೇವ್ ಅವರಿಗೆ ಕೂಡ ಫೀಚರ್ ಫೋಟೋಗ್ರಫಿ ವಿಭಾಗದಲ್ಲಿ ಪುಲಿಟ್ಜರ್ ದೊರಕಿದೆ.

- Advertisement -
spot_img

Latest News

error: Content is protected !!