Sunday, May 5, 2024
Homeಕರಾವಳಿಪಿಯುಸಿ ಪ್ರವೇಶಕ್ಕೆ ಗ್ರೀನ್ ಸಿಗ್ನಲ್: ಏನೇನಿದೆ ನಿಯಮ?

ಪಿಯುಸಿ ಪ್ರವೇಶಕ್ಕೆ ಗ್ರೀನ್ ಸಿಗ್ನಲ್: ಏನೇನಿದೆ ನಿಯಮ?

spot_img
- Advertisement -
- Advertisement -

ಬೆಂಗಳೂರು: ಎಸ್ ಎಸ್ ಎಲ್ ಸಿ ಫಲಿತಾಂಶದ ಮರು ದಿನವೇ ಪಿಯುಸಿ ಪ್ರವೇಶಾತಿಗೆ ರಾಜ್ಯ ಸರ್ಕಾರದಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ. ಇಂದಿನಿಂದ ಆಗಸ್ಟ್ 30 ರ ವರೆಗೆ ದಂಡ ಶುಲ್ಕವಿಲ್ಲದ ದಾಖಲಾತಿಗೆ ಅವಕಾಶ ಕಲ್ಪಿಸಲಾಗಿದೆ.

ಆಗಸ್ಟ್ ಬಳಿಕ ಪ್ರಥಮ ಪಿಯುಸಿಗೆ ಪ್ರವೇಶಾತಿ ಪಡೆದರೆ ದಂಡ ಪಾವತಿಸಬೇಕಾಗುತ್ತದೆ. ಸೆಪ್ಟೆಂಬರ್ 1 ರಿಂದ 11 ರವರೆಗೆ ವಿಳಂಬ ಶುಲ್ಕ ನೀಡಿ ಅಡ್ಮಿಷನ್ ಗೆ ಅವಕಾಶ ನೀಡಲಾಗಿದೆ.

ಅಡ್ಮಿಷನ್ ವಿಳಂಬ ಶುಲ್ಕ 670 ರೂ. ನಿಗದಿಪಡಿಸಲಾಗಿದೆ‌. ಇದಲ್ಲದೇ ಸೆಪ್ಟೆಂಬರ್ 11 ರ ಬಳಿಕವೂ ದಾಖಲಾತಿ ಆಗದೇ ಇದ್ದಲ್ಲಿ ವಿಶೇಷ ದಂಡ ಶುಲ್ಕ ಪಾವತಿಸಿ ಪ್ರವೇಶ ಪಡೆಯಬಹುದು. 2890 ರೂಪಾಯಿ ದಂಡ ಕಟ್ಟಿ ಸೆಪ್ಟೆಂಬರ್ 13 ರಿಂದ 25 ರವರೆಗೆ ದಾಖಲಾತಿ ಆಗಬಹುದಾಗಿದೆ.

ಈ ಕುರಿತು ಪದವಿ ಪೂರ್ವ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.

- Advertisement -
spot_img

Latest News

error: Content is protected !!