Wednesday, June 24, 2026
Homeಕರಾವಳಿಉಡುಪಿಬೈಂದೂರು ಸರಕಾರಿ ಆಸ್ಪತ್ರೆಯ ಅವ್ಯವಸ್ಥೆ ವಿರುದ್ಧ ಸಾರ್ವಜನಿಕರಿಂದ ಪ್ರತಿಭಟನೆ ಹಾಗೂ ಧರಣಿ

ಬೈಂದೂರು ಸರಕಾರಿ ಆಸ್ಪತ್ರೆಯ ಅವ್ಯವಸ್ಥೆ ವಿರುದ್ಧ ಸಾರ್ವಜನಿಕರಿಂದ ಪ್ರತಿಭಟನೆ ಹಾಗೂ ಧರಣಿ

- Advertisement -
- Advertisement -

ಕುಂದಾಪುರದ ಬೈಂದೂರು ಸರಕಾರಿ ಆಸ್ಪತ್ರೆಯ ಅವ್ಯವಸ್ಥೆ ವಿರುದ್ಧ ಸಾರ್ವಜನಿಕರಿಂದ ಪ್ರತಿಭಟನೆ ಹಾಗೂ ಧರಣಿಯು ಸರಕಾರಿ ಆಸ್ಪತ್ರೆ ಮುಂಬಾಗದಲ್ಲಿ ನಡೆಯಿತು.

ಮುಖ್ಯ ವೈದ್ಯಾಧಿಕಾರಿ ವಿರುದ್ಧ ನಾಗರಿಕರು‌ ಆಕ್ರೋಷ ವ್ಯಕ್ತಪಡಿಸಿದರು. ಬೈಂದೂರು‌ ಪೇಟೆ ಮೂಲಕವಾಗಿ ಮೆರವಣಿಗೆ ಮೂಲಕ ಬೈಂದೂರು ತಾಲೂಕು ದಂಡಾಧಿಕಾರಿ ಕಚೇರಿ ತನಕ‌ ಸಾಗಿ ಬಂದರು.

ಇಲ್ಲಿ ಬರುವ ಜನಸಾಮಾನ್ಯರು ಹಾಗೂ ಬಡ ಅನಾರೋಗ್ಯ ಪೀಡಿತರಿಗೆ ಸೂಕ್ತ ಗುಣಮಟ್ಟದ ಚಿಕಿತ್ಸೆ, ತುರ್ತುಚಿಕಿತ್ಸೆ ಒದಗಿಸುತ್ತಿಲ್ಲ. ಆಸ್ಪತ್ರೆಯಲ್ಲಿ ನಾಲ್ಕು ಅಂಬುಲೆನ್ಸ್ ವಾಹನ ಇದ್ದರೂ ಅದಕ್ಕೆ ಚಾಲಕರಿಲ್ಲ. ಆಸ್ಪತ್ರೆಗೆ ಡಯಾಲಿಸಿಸ್, ಸ್ಕ್ಯಾನಿಂಗ್ ಯುನಿಟ್ ಮೊದಲಾದವುಗಳ ಅಗತ್ಯವಿದ್ದು ಇದನ್ನೆಲ್ಲಾ ಒದಗಿಸಿ ಜನರಿಗೆ 24 ಗಂಟೆಗಳ ವೈದ್ಯಕೀಯ ಸೌಲಭ್ಯ ಒದಗಿಸಲು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

- Advertisement -

Latest News

error: Content is protected !!