Tuesday, May 21, 2024
Homeತಾಜಾ ಸುದ್ದಿಬಂಟ್ವಾಳ: ರಸ್ತೆ ಯಾವುದು,ಚರಂಡಿ ಯಾವುದು ಎಂಬಂತಾಗಿದೆ ಇಲ್ಲಿನ ಸ್ಥಿತಿ: ವಾಹನ ಸವಾರರರಿಗೆ ದೊಡ್ಡ ಫಜೀತಿ: ಗುತ್ತಿಗೆ...

ಬಂಟ್ವಾಳ: ರಸ್ತೆ ಯಾವುದು,ಚರಂಡಿ ಯಾವುದು ಎಂಬಂತಾಗಿದೆ ಇಲ್ಲಿನ ಸ್ಥಿತಿ: ವಾಹನ ಸವಾರರರಿಗೆ ದೊಡ್ಡ ಫಜೀತಿ: ಗುತ್ತಿಗೆ ವಹಿಸಿಕೊಂಡ ಕಂಪನಿ ವಿರುದ್ಧ ಸಾರ್ವಜನಿಕರ ಆಕ್ರೋಶ

spot_img
- Advertisement -
- Advertisement -

ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿ 75 ರ ಬಂಟ್ವಾಳದಿಂದ ಮಾಣಿವರಗೆ ಸಂಚಾರಕ್ಕೆ ಅವಕಾಶ ಮಾಡಿಕೊಡಿ ಎಂದು ಸಾರ್ವಜನಿಕರು ಅಳಲು ವ್ಯಕ್ತಪಡಿಸಿದ್ದಾರೆ.

ಬಿ.ಸಿ.ರೋಡಿನಿಂದ ಅಡ್ಡಹೊಳೆವರೆಗೆ ಚತುಷ್ಪತ ಕಾಮಗಾರಿ ನಡೆಯುತ್ತಿದ್ದು, ಸಂಚಾರಕ್ಕೆ ತೊಂದರೆಯಾಗುತ್ತಿದೆ. ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಯಲ್ಲಿ ಈ ಕಾಮಗಾರಿ ನಡೆಯುತ್ತಿರುವುದರಿಂದ ಇಲ್ಲಿ ನೂರಾರು ವಾಹನಗಳು ಸಂಚಾರ ಮಾಡುವ ಹಿನ್ನೆಲೆಯಲ್ಲಿ ಗುತ್ತಿಗೆ ವಹಿಸಿ ಕೊಂಡ ಕೆ.ಎನ್.ಆರ್.ಸಿ.ಕಂಪೆನಿ ಸಂಚಾರಕ್ಕೆ ತಾತ್ಕಲಿಕ ಬದಲಿ ರಸ್ತೆ ನಿರ್ಮಿಸಿ ಕಾಮಗಾರಿ ಮುಂದುವರಿಸಿದ್ದರೆ ಉತ್ತಮವಾಗಿತ್ತು ಎಂಬ ಮಾತುಗಳು ಕೇಳಿಬಂದಿವೆ.

ಮಳೆ ಆರಂಭವಾದ ಬೆನ್ನಲ್ಲೇ ವಾಹನ ಸವಾರರು ರಸ್ತೆಯಲ್ಲಿ ಸಂಚಾರ ಮಾಡಲು ಒದ್ದಾಡುತ್ತಿದ್ದಾರೆ.ಮಳೆಗಾಲ ಮುಗಿಯುವ ವರೆಗೆ ಈ ರಸ್ತೆಯಲ್ಲಿ ಸಂಚಾರ ಮಾಡುವುದು ಕಷ್ಟದ ಮಾತು. ಕಲ್ಲಡ್ಕ ಮತ್ತು ಸೂರಿಕುಮೇರು ಎಂಬಲ್ಲಿ ರಸ್ತೆ ಕಾಂಕ್ರೀಟಿಕರಣ ಕಾಮಗಾರಿ ನಡೆಯುತ್ತಿದ್ದು, ಇಲ್ಲಿ ಸಂಚಾರ ಮಾಡಲು ರಸ್ತೆಯೇ ಕಾಣುತ್ತಿಲ್ಲ.

ಗುತ್ತಿಗೆ ವಹಿಸಿಕೊಂಡ ಕೆ.ಎನ್.ಆರ್.ಸಿ.ಕಂಪೆನಿ ರಸ್ತೆಯನ್ನು ಅಗೆದು ಹಾಕಿ ಜಲ್ಲಿ ಕಲ್ಲುಹಾಕಿ ತಾತ್ಕಾಲಿಕ ರಸ್ತೆ ನಿರ್ಮಾಣ ಮಾಡಿದ್ದಾರೆ. ಪ್ರಸ್ತುತ ರಸ್ತೆ ಯಲ್ಲಿ ಮಳೆ ನೀರು ಹರಿದು ಹೋಗುತ್ತಿದ್ದು ರಸ್ತೆ ತುಂಬಾ ಕೆಸರುಮಯವಾಗಿದೆ. ಹಾಗಾಗಿ ರಸ್ತೆ ಯಾವುದು ತೋಡು ಯಾವುದು ಎಂದು ಸಾರ್ವಜನಿಕರು ಪ್ರಶ್ನೆ ಮಾಡುವಂತಾಗಿದೆ.

- Advertisement -
spot_img

Latest News

error: Content is protected !!