Saturday, June 6, 2026
Homeಕರಾವಳಿಉಡುಪಿಕುಂದಾಪುರ: ಕೋಮು ಗಲಭೆ ಸೃಷ್ಟಿಸಿ ಗಲಾಟೆ , ಇಬ್ಬರು ಗಡಿಪಾರು

ಕುಂದಾಪುರ: ಕೋಮು ಗಲಭೆ ಸೃಷ್ಟಿಸಿ ಗಲಾಟೆ , ಇಬ್ಬರು ಗಡಿಪಾರು

- Advertisement -
- Advertisement -

ಕುಂದಾಪುರ: ಸಾರ್ವಜನಿಕವಾಗಿ ಶಾಂತಿ ಭಂಗ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಗಡಿಪಾರು ಮಾಡಲಾಗಿದೆ.

ಕೋಡಿಯ ಇಫಾನ್ ( 24 ) ,ಸಚಿನ್ ( 20 ) ಇಬ್ಬರ ವಿರುದ್ಧ ದೂರು ದಾಖಲಾಗಿದೆ . ಈ ಇಬ್ಬರು ಕೋಮು ಗಲಭೆ , ಹಲ್ಲೆ , ದೊಂಬಿ , ಹಾಗೂ ಇತರರಿಗೆ ಜೀವ ಬೆದರಿಕೆ ಒಡ್ಡಿ ಗಲಾಟೆ ನಡೆಸುತ್ತಿದ್ದರು.

ಹಾಗೇ ಸಾರ್ವಜನಿಕ ಸೊತ್ತುಗಳಿಗೆ ಹಾನಿ ಮಾಡುತ್ತಿದ್ದರು
ಹಲವು ಬಾರಿ ತಿಳುವಳಿಕೆ ಹೇಳಿದರೂ ಸಹ ಇಬ್ಬರೂ ತಮ್ಮ ಕೃತ್ಯವನ್ನು ಮುಂದುವರಿಸಿಕೊಂಡು ಬಂದಿರುವುದರಿಂದ ಇಬ್ಬರ ವಿರುದ್ದ ಕುಂದಾಪುರ ಠಾಣೆಯಲ್ಲಿ ಕಮ್ಯೂನಲ್ ಗೂಂಡ ಕಾಯ್ದೆಯಡಿ ಪ್ರಕರಣ ದಾಖಲಿಸಿ ಗಡಿಪಾರು ಮಾಡಲಾಗಿದೆ .

ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದೆ .

- Advertisement -

Latest News

error: Content is protected !!