Thursday, June 4, 2026
Homeಕರಾವಳಿಮಂಗಳೂರು: ಪೆಟ್ರೋಲ್ ಹಾಕಿ ಬೆಂಕಿ ಕೊಟ್ಟು ಕಾರ್ಮಿಕನನ್ನು ಕೊಂದ ಪ್ರಕರಣ: ಮೃತ ಕಾರ್ಮಿಕನ ಅಂತ್ಯ ಸಂಸ್ಕಾರ...

ಮಂಗಳೂರು: ಪೆಟ್ರೋಲ್ ಹಾಕಿ ಬೆಂಕಿ ಕೊಟ್ಟು ಕಾರ್ಮಿಕನನ್ನು ಕೊಂದ ಪ್ರಕರಣ: ಮೃತ ಕಾರ್ಮಿಕನ ಅಂತ್ಯ ಸಂಸ್ಕಾರ ನೆರವೇರಿಸಿದ ಸಾರ್ವಜನಿಕರು

- Advertisement -
- Advertisement -

ಮಂಗಳೂರು: ಪೆಟ್ರೋಲ್ ಹಾಕಿ ಬೆಂಕಿ ಕೊಟ್ಟು ಕಾರ್ಮಿಕನನ್ನು ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರು ಮೃತ ಕಾರ್ಮಿಕನ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ. ಪ್ರಕರಣದ ದೂರುದಾರರು‌ ಹಾಗೂ ಪ್ರಮುಖ ಸಾಕ್ಷಿಯಾಗಿರುವ ಮಹಮ್ಮದ್ ಅಝರ್ ಅವರ  ನೇತೃತ್ವದಲ್ಲಿ ಅಂತ್ಯಸಂಸ್ಕಾರ ಕಾರ್ಯ ನೆಡದಿದೆ.

ಮಂಗಳೂರಿನ ನಂದಿಗುಡ್ಡೆಯ ಸ್ಮಶಾನದಲ್ಲಿ ಅಂತಿಮ‌ ವಿಧಿವಿಧಾನ ನೆರವೇರಿತು. ಮಂಗಳೂರಿನ ಮುಳಿಹಿತ್ಲು ಜಂಕ್ಷನ್ ಬಳಿ  ತೌಸಿಫ್ ಹುಸೈನ್ ಎಂಬಾತನ ಜನರಲ್ ಸ್ಟೋರ್ ನಲ್ಲಿ ಕೆಲಸಕ್ಕಿದ್ದ ಉತ್ತರ ಭಾರತ ಮೂಲದ ಗಜ್ಞಾನ್ @ ಜಗು ನನ್ನು ಮಾಲೀಕ ತೌಸಿಫ್ ಹುಸೈನ್ ಕೊಲೆ ಮಾಡಿದ್ದ. ಕ್ಷುಲ್ಲಕ ಕಾರಣಕ್ಕೆ ಕಾರ್ಮಿಕನನ್ನು ಪಾಪಿ ತೌಸಿಫ್ ಹುಸೈನ್ ಬೆಂಕಿ ಹಚ್ಚಿ ಕೊಂದಿದ್ದ. ಕಾರ್ಮಿಕ ಗಜ್ಞಾನ್ ಕುಟುಂಬಸ್ಥರು ಯಾರೆಂದೆ ಪತ್ತೆಯಾಗದಿರುವ ಕಾರಣ ಸ್ಥಳೀಯರೇ ಆತನ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ಪಾಂಡೇಶ್ವರ ಪೊಲೀಸರ ಸಮ್ಮುಖದಲ್ಲಿಯೇ  ಅಂತ್ಯಸಂಸ್ಕಾರ ನಡೆದಿದೆ.

ಈಗಾಗಲೇ ಪ್ರಕರಣದ ಆರೋಪಿ ತೌಸಿಫ್ ಹುಸೈನ್ ಪಾಂಡೇಶ್ವರ ಪೊಲೀಸರು ಬಂಧಿಸಿದ್ದಾರೆ.

- Advertisement -

Latest News

error: Content is protected !!