Wednesday, June 24, 2026
Homeಚಿಕ್ಕಮಗಳೂರುಕೊಟ್ಟಿಗೆಹಾರ; ತನ್ನ ಕಾರಿಗೆ ಪೊಲೀಸ್ ಎಂದು ಬೋರ್ಡ್ ಹಾಕ್ಕೊಂಡಿದ್ದ ಪೊಲೀಸ್ ಅಧಿಕಾರಿಗೆ ದಂಡ ಹಾಕಿದ ಪಿಎಸ್...

ಕೊಟ್ಟಿಗೆಹಾರ; ತನ್ನ ಕಾರಿಗೆ ಪೊಲೀಸ್ ಎಂದು ಬೋರ್ಡ್ ಹಾಕ್ಕೊಂಡಿದ್ದ ಪೊಲೀಸ್ ಅಧಿಕಾರಿಗೆ ದಂಡ ಹಾಕಿದ ಪಿಎಸ್ ಐ

- Advertisement -
- Advertisement -

ಕೊಟ್ಟಿಗೆಹಾರ; ತನ್ನ ಖಾಸಗಿ ಕಾರಿಗೆ ಪೊಲೀಸ್ ಎಂದು ಬೋರ್ಡ್ ಹಾಕ್ಕೊಂಡಿದ್ದ ಪೊಲೀಸ್ ಅಧಿಕಾರಿಗೆ ಪಿಎಸ್ ಐದಂಡ ಹಾಕಿದಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆ ಹಾರ ಚೆಕ್ ಪೋಸ್ಟ್ ನಲ್ಲಿ ನಡೆದಿದೆ.

ಪೊಲೀಸ್ ಅಧಿಕಾರಿಯೊಬ್ಬರು ಸ್ವಂತ ಕಾರಿಗೆ ಪೊಲೀಸ್ ಬೋರ್ಡ್ ಹಾಕ್ಕೊಂಡು ಕುಟುಂಬದೊಂದಿಗೆ ಧಾರವಾಡದಿಂದ ಧರ್ಮಸ್ಥಳಕ್ಕೆ ಪ್ರವಾಸ  ಹೋಗುತ್ತಿದ್ದರು. ಈ ವೇಳೆ  ಕಾರನ್ನು ಪಿಎಸ್ ಐ ರೇಣುಕಾ ಕೊಟ್ಟಿಗೆಹಾರ ಚೆಕ್‌ಪೋಸ್ಟ್ ನಲ್ಲಿ ತಡೆದು ಪರಿಶೀಲನೆ ನಡೆಸಿದಾಗ ವಾಹನದಲ್ಲಿ ಅಧಿಕೃತ ಕರ್ತವ್ಯವಿಲ್ಲದಿದ್ದರೂ ‘ಪೊಲೀಸ್’ ಎಂಬ ನಾಮಫಲಕ ಅಳವಡಿಸಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಪಿಎಸ್‌ಐ ರೇಣುಕಾ ಅವರು, ಹುದ್ದೆ ಅಥವಾ ಪರಿಚಯವನ್ನು ಲೆಕ್ಕಿಸದೇ, ಅಕ್ರಮವಾಗಿ ಬಳಸಲಾಗುತ್ತಿದ್ದ ‘ಪೊಲೀಸ್’ ನಾಮಫಲಕವನ್ನು ಸ್ಥಳದಲ್ಲೇ ತೆರವುಗೊಳಿಸಿ, ಸಂಚಾರ ನಿಯಮ ಉಲ್ಲಂಘನೆ ಸಂಬಂಧ ದಂಡ ವಿಧಿಸಿ ಪ್ರಕರಣ ದಾಖಲಿಸಿದ್ದಾರೆ.ಈ ಮೂಲಕ ಕಾನೂನು ಎಲ್ಲರಿಗೂ ಸಮಾನ ಎಂಬ ಸಂದೇಶವನ್ನು ಸಮಾಜಕ್ಕೆ ರವಾನಿಸಿದ್ದಾರೆ.

- Advertisement -

Latest News

error: Content is protected !!