Thursday, June 4, 2026
Homeತಾಜಾ ಸುದ್ದಿನ್ಯಾಯ ಸಿಗದೇ ಇದ್ರೆ ಟೆರರಿಸ್ಟ್ ಗಳಿಗೆ ಬೆಂಬಲ ನೀಡ್ತೀವಿ : ಪ್ರಧಾನಿಗೆ ಪತ್ರ ಬರೆದ ನೊಂದ...

ನ್ಯಾಯ ಸಿಗದೇ ಇದ್ರೆ ಟೆರರಿಸ್ಟ್ ಗಳಿಗೆ ಬೆಂಬಲ ನೀಡ್ತೀವಿ : ಪ್ರಧಾನಿಗೆ ಪತ್ರ ಬರೆದ ನೊಂದ ಪಿ.ಎಸ್.ಐ ಅಭ್ಯರ್ಥಿಗಳು

- Advertisement -
- Advertisement -

ಬೆಂಗಳೂರು : ಪಿಎಸ್ ಐ ನೇಮಕಾತಿ ಹಗರಣದಿಂದ ಮಾಡಬಾರದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಿರುವ  ಪಿಎಸ್ ಐ ಅಭ್ಯರ್ಥಿಗಳು ಪ್ರಧಾನಿ ನರೇಂದ್ರ ಮೋದಿಗೆ ರಕ್ತದಲ್ಲಿ ಬರೆದಿದ್ದಾರೆ ಎನ್ನಲಾಗಿದ್ದು, ಈ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿರುವ ಅಭ್ಯರ್ಥಿಗಳು, ಪಿಎಸ್ ಐ ಪರೀಕ್ಷೆಯಲ್ಲಿ ಆಯ್ಕೆಯಾಗಿ ಮೋಸ ಹೋದವರಿಗೆ ನ್ಯಾಯ ಸಿಗಬೇಕು. ಅನ್ಯಾಯ ಮಾಡಿದವರನ್ನು ಜೈಲಿಗೆ ಹಾಕಿ. ಆದರೆ ನಿಯತ್ತಿನಿಂದ ಬರೆದವರಿಗೆ ಮೋಸ ಆಗಬಾರದು. ಕರ್ನಾಟಕ ರಾಜ್ಯದಲ್ಲಿ ಸರ್ಕಾರಿ ಹುದ್ದೆಗಳು ಹಣ ಇದ್ದವರಿಗೆ ಮಾತ್ರ ಎನ್ನುವಂತ ವ್ಯವಸ್ಥೆ ಬಂದುಬಿಟ್ಟಿದೆ. ಹೀಗಾಗಿ ಇನ್ಮುಂದೆ ನಾವು ಸರ್ಕಾರಿ ಹುದ್ದೆ ಪರೀಕ್ಷೆಗಳನ್ನು ಬರೆಯುವುದಿಲ್ಲ.

ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ನಮಗೆ ಅಪಾರ ಗೌರವವಿದೆ. ತನಿಖೆ ಮಾಡಿ ನ್ಯಾಯ ಕೊಡಿಸುತ್ತಾರೆ ಎನ್ನುವ ನಂಬಿಕೆ ಇದೆ. ಒಂದು ವೇಳೆ ನ್ಯಾಯಕೊಡಿಸದಿದ್ದರೆ ನಾವು ಮುಂದೆ ಟೆರರಿಸ್ಟ್ ಗಳಿಗೆ ಕೈಜೋಡಿಸುತ್ತೇವೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

- Advertisement -

Latest News

error: Content is protected !!