Friday, June 5, 2026
Homeಕರಾವಳಿಉಡುಪಿಕುಂದಾಪುರ: ಪಾಳು ಬಾವಿಗೆ ಬಿದ್ದ ಜಿಂಕೆ ಮರಿಯ ರಕ್ಷಣೆ

ಕುಂದಾಪುರ: ಪಾಳು ಬಾವಿಗೆ ಬಿದ್ದ ಜಿಂಕೆ ಮರಿಯ ರಕ್ಷಣೆ

- Advertisement -
- Advertisement -

ಕುಂದಾಪುರ : ಪಾಳು ಬಾವಿಗೆ ಬಿದ್ದ ಜಿಂಕೆ ಮರಿಯನ್ನು ಗ್ರಾಮಸ್ಥರು ರಕ್ಷಿಸಿದ ಘಟನೆ ಕುಂದಾಪುರದ ಕೇದೂರು ಗ್ರಾಮ ಪಂಚಾಯತ್ ನ ಶಾನಾಡಿಯಲ್ಲಿ ನಡೆದಿದೆ.

ನಿನ್ನೆ ರಾತ್ರಿ ವೇಳೆ ಕಾಡಿನಿಂದ ನಾಡಿಗೆ ಬಂದಿದ್ದ ಜಿಂಕೆ‌ಮರಿ ದಾರಿ ಕಾಣದೆ ಪಾಳು ಬಾವಿಗೆ ಬಿದ್ದಿತ್ತು. ಆಕಸ್ಮಿಕವಾಗಿ ಬಾವಿಗೆ ಬಿದ್ದ ಜಿಂಕೆ ಮರಿಯನ್ನು ಗಮನಿಸಿದ ಶಾನಾಡಿಯ ಯುವಕರ ತಂಡ ಹಗ್ಗ ಮತ್ತು ಬುಟ್ಟಿಯ ನೆರವಿನಿಂದ ಹರಸಾಹಸಪಟ್ಟು ಜಿಂಕೆ ಮರಿಯನ್ನು ರಕ್ಷಿಸಿದ್ದಾರೆ. ಸುಮಾರು 1 ವರ್ಷ ಪ್ರಾಯ ಜಿಂಕೆ ಮರಿ ಇದಾಗಿದ್ದು, ಸದ್ಯ ಅರಣ್ಯ ಇಲಾಖೆಯವರಿಗೆ ಇದನ್ನು ಹಸ್ತಾಂತರಿಸಲಾಗಿದೆ. ಬಳಿಕ ಇಲಾಖೆಯವರು ಜಿಂಕೆ ಮರಿಯನ್ನು ರಕ್ಷಿತಾರಣ್ಯಕ್ಕೆ ಬಿಟ್ಟಿದ್ದಾರೆ.

- Advertisement -

Latest News

error: Content is protected !!