Sunday, August 30, 2026
Homeಮಹಾನ್ಯೂಸ್ಹೈಟೆಕ್ ವೇಶ್ಯಾವಾಟಿಕೆ ಓರ್ವ ಸಿನಿಮಾ ನಟಿ ಹಾಗೂ ಮೂವರು ಸೀರಿಯಲ್ ನಟಿಯರ ರಕ್ಷಣೆ

ಹೈಟೆಕ್ ವೇಶ್ಯಾವಾಟಿಕೆ ಓರ್ವ ಸಿನಿಮಾ ನಟಿ ಹಾಗೂ ಮೂವರು ಸೀರಿಯಲ್ ನಟಿಯರ ರಕ್ಷಣೆ

- Advertisement -
- Advertisement -

ಮುಂಬೈ:  ಹೈಟೆಕ್ ವೇಶ್ಯಾವಾಟಿಕೆ ಅಡ್ಡೆ ಮೇಲೆ ಅಪರಾಧ ವಿಭಾಗದ ಪೊಲೀಸರು ದಾಳಿ ನಡೆಸಿದ್ದು, ಓರ್ವ ಸಿನಿಮಾ ನಟಿಯನ್ನು ಬಂಧಿಸಿದ್ದಾರೆ. ಅಲ್ಲದೆ ಮೂವರು ಧಾರಾವಾಹಿ ನಟಿಯರನ್ನು ರಕ್ಷಿಸಿದ್ದಾರೆ.

ನಟಿಯರು ಹಾಗೂ ಬೆಳ್ಳಿ ಡ್ಯಾನ್ಸ್ ಮಾಡುವ ಹುಡುಗಿಯರು ಸೆಕ್ಸ್ ದಂಧೆ ನಡೆಸುತ್ತಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ. ನಕಲಿ ಗ್ರಾಹಕರನ್ನು ಕಳುಹಿಸಿದ್ದು, ಮೂವರು ಮಹಿಳೆಯರಿಗೆ 10.50 ಲಕ್ಷ ರೂ. ವ್ಯವಹಾರ ಕುದುರಿಸಿ ನಟಿ ಮಣಿಯರಿಗೆ ಪೊಲೀಸರು ಬಲೆ ಬೀಸಿದ್ದಾರೆ.

ಬಳಿಕ ಹಿರಿಯ ಇನ್‍ಸ್ಪೆಕ್ಟರ್ ಮಹೇಶ್ ತವಾಡೆ ಅವರ ನೇತೃತ್ವದ ತಂಡ ಗೋರೆಗಾಂವ್‍ನ 5 ಸ್ಟಾರ್ ಹೋಟೆಲ್ ಮೇಲೆ ದಾಳಿ ನಡೆಸಿದ್ದು, ಈ ವೇಳೆ ನಟಿಯರನ್ನು ಬಂಧಿಸಿದ್ದಾರೆ. ಐಪಿಸಿ ಹಾಗೂ ಅನೈತಿಕ ಕಳ್ಳಸಾಗಣೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದು, ವನ್ರಾಯ್ ಪೊಲೀಸ್ ಠಾಣೆಯ ಅಧಿಕಾರಿಗಳು ಹೆಚ್ಚಿನ ತನಿಖೆಯನ್ನು ಮುಂದುವರಿಸಿದ್ದಾರೆ.

- Advertisement -

Latest News

error: Content is protected !!