Wednesday, June 26, 2024
HomeUncategorizedಬೆಳ್ತಂಗಡಿ : ಗರ್ಡಾಡಿಯಲ್ಲಿ ಜಾಗದ ತಕರಾರು ಪ್ರಕರಣ :ಗೇಟಿನ ಮುಂದೆ 25 ಮೇಕೆಯ ತಲೆ ಕಡಿದು...

ಬೆಳ್ತಂಗಡಿ : ಗರ್ಡಾಡಿಯಲ್ಲಿ ಜಾಗದ ತಕರಾರು ಪ್ರಕರಣ :ಗೇಟಿನ ಮುಂದೆ 25 ಮೇಕೆಯ ತಲೆ ಕಡಿದು ಫೋಟೋ ಇಟ್ಟು ವಾಮಾಚಾರ

spot_img
- Advertisement -
- Advertisement -

ಬೆಳ್ತಂಗಡಿ : ಎರಡು ವ್ಯಕ್ತಿಗಳ ನಡುವೆ ಹಲವು ವರ್ಷಗಳಿಂದ ನಡೆಯುತ್ತಿದ್ದ ಜಾಗದ ತಕರಾರು ಸಂಬಂಧ ಇದೀಗ ಜಾಗವನ್ನು ಪ್ರವೇಶಿಸುವ ಗೇಟಿನ ಮುಂದೆ 25 ಮೇಕೆಯ ತಲೆ ಕಡಿದು ಅದಕ್ಕೆ 25 ಮಂದಿಯ ಪೋಟೋ ಇಟ್ಟು ವಾಮಾಚಾರ ಮಾಡಿದ ಘಟನೆ ಬೆಳ್ತಂಗಡಿಯಲ್ಲಿ ಜೂ.10 ರಂದು ಬೆಳಕಿಗೆ ಬಂದಿದೆ.

ಬೆಳ್ತಂಗಡಿ ತಾಲೂಕಿನ ಪಡಂಗಡಿ ಗ್ರಾಮದ ಬೋಳಿಯಾರ್ ಎಂಬಲ್ಲಿ 25 ಎಕ್ರರೆ ಜಾಗವನ್ನು ಕೇರಳ ಮೂಲದ ಗೋಪಾ ಕುಮಾರ್ ಮತ್ತು ಸುಮೇಶ್ ಎಂಬವರು ಕಳೆದ ವರ್ಷ ಮಂಗಳೂರು ವೈಷ್ಣವಿ ಟ್ರಾನ್ಸ್ಪೋರ್ಟ್ ಮಾಲೀಕ ರಾಜೇಶ್ ಪ್ರಭು ಎಂಬವರು ಖರೀದಿ ಮಾಡಿಕೊಂಡು ದಾಖಲೆ ಪತ್ರ ವರ್ಗಾವಣೆ ಮಾಡಿಸಿ ಜಾಗದ 8 ಕೋಟಿ ರೂಪಾಯಿ ಹಣ ನೀಡದೆ ಮೋಸ ಮಾಡಿದ್ದರು. ಈ ಬಗ್ಗೆ ಹಲವು ಸಮಯ ಗಲಾಟೆ ನಡೆಯುತ್ತಿತ್ತು. ನಂತರ ಮಾರಾಟ ಮಾಡಿದ ಜಾಗದ ಮಾಲೀಕರಾದ ಗೋಪಾ ಕುಮಾರ್ ಮತ್ತು ಸುಮೇಶ್ ಸೇರಿ ಬೆಳ್ತಂಗಡಿ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು‌.‌

ಈ ಬಗ್ಗೆ ಬೆಳ್ತಂಗಡಿ ಕೋರ್ಟ್ ನಲ್ಲಿ ಹಣ ನೀಡದೆ ಮೋಸ ಮಾಡಿದ ಬಗ್ಗೆ ದಾಖಲೆಗಳ ಮೂಲಕ ತಿಳಿದಿದ್ದು‌. ಜಾಗವನ್ನು ಮೂರನೇ ವ್ಯಕ್ತಿಗೆ ರಾಜೇಶ್ ಪ್ರಭು ಮಾರಾಟ ಮಾಡಬಾರದು ಮತ್ತು ಹಿಂದಿನ ಮೂಲ ಜಾಗದ ಮಾಲೀಕರಾದ ಗೋಪಾ ಕುಮಾರ್ ಮತ್ತು ಸುಮೇಶ್ ವಶಕ್ಕೆ ಬೆಳ್ತಂಗಡಿ ಕೋರ್ಟ್ ನೀಡಿ ಕೃಷಿ ಭೂಮಿಯನ್ನು ನೋಡಿಕೊಳ್ಳುತ್ತಿದ್ದರು‌‌.

ಇದೀಗ ಜಾಗಕ್ಕೆ ಪ್ರವೇಶ ಮಾಡುವ ಗೇಟಿನ ಮುಂದೆ ಜೂ.9 ರಂದು ರಾತ್ರಿ 25 ಮೇಕೆಯ ತಲೆ ಕಡಿದು ಅದಕ್ಕೆ 25 ಮಂದಿಯ ಫೋಟೋಗಳನ್ನು ಇಟ್ಟು ಜಾಗ ಖರೀಧಿ ಮಾಡಿ ಹಣ ಮೋಸ ಮಾಡಿದ್ದ ಮಂಗಳೂರಿನ ವೈಷ್ಣವಿ ಟ್ರಾನ್ಪೋರ್ಟ್ ಮಾಲೀಕನಾಗಿರುವ ಪ್ರಭಾವಿ ವ್ಯಕ್ತಿ ರಾಜೇಶ್ ಪ್ರಭು ಎಂಬವರು ವಾಮಾಚಾರ ಮಾಡಿದ್ದಾರೆ ಎಂದು ಆರೋಪ ಕೇಳಿಬರುತ್ತಿದೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸರಿಗೆ ಮಾಹಿತಿ ನೀಡಿದ್ದು. ಪೊಲೀಸರು ಸ್ಥಳಕ್ಕೆ ಬಂದು ಮಾಹಿತಿ ಕಲೆ ಹಾಕುತ್ತಿದ್ದಾರೆ‌

- Advertisement -
spot_img

Latest News

error: Content is protected !!