Thursday, June 4, 2026
Homeಪ್ರಮುಖ-ಸುದ್ದಿಯುವ ವಿಚಾರವಾಗಿ ನನಗೆ ಯಾವುದೇ ಮಾಹಿತಿ ಇಲ್ಲ; ಅದು ಅವರವರ ವೈಯಕ್ತಿಕ ವಿಚಾರ, ನಾನು ಮಾತಾಡೋದು...

ಯುವ ವಿಚಾರವಾಗಿ ನನಗೆ ಯಾವುದೇ ಮಾಹಿತಿ ಇಲ್ಲ; ಅದು ಅವರವರ ವೈಯಕ್ತಿಕ ವಿಚಾರ, ನಾನು ಮಾತಾಡೋದು ಸರಿಯಲ್ಲ: ಶಿವಮೊಗ್ಗದಲ್ಲಿ ಶಿವರಾಜ್ ಕುಮಾರ್ ಹೇಳಿಕೆ

- Advertisement -
- Advertisement -

ಶಿವಮೊಗ್ಗ : ಯುವರಾಜ್ ಕುಮಾರ್ ಹಾಗೂ ಶ್ರೀದೇವಿ ವಿಚ್ಛೇದನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶಿವಮೊಗ್ಗದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ.

ಯುವ ವಿಚಾರವಾಗಿ ನನಗೆ ಯಾವುದೇ ಮಾಹಿತಿ ಇಲ್ಲ. ಗೊತ್ತಿಲ್ಲದೇ ನಾನು ಯಾವುದೇ ವಿಷಯವನ್ನು ಮಾತನಾಡಲ್ಲ. ಅದು ಅವರವರ ವೈಯಕ್ತಿಕ ವಿಚಾರ, ನಾನು ಮಾತಾಡೋದು ಸರಿಯಲ್ಲ.ಬೆಂಗಳೂರಿಗೆ ನಾನು ಹೋಗುತ್ತಿದ್ದೇನೆ ಏನಾಗುತ್ತದೆ ನೋಡೋಣ ಎಂದು ಶಿವರಾಜ್ ಕುಮಾರ್ ಹೇಳಿದ್ದಾರೆ.

ಇನ್ನು ಇದೇ ವಿಚಾರವಾಗಿ ಗೀತಾ ಶಿವರಾಜಕುಮಾರ್ ಅವರು ಕೂಡ ಪ್ರತಿಕ್ರಿಯೆ ನೀಡಿದ್ದು, ಇದು ನಮ್ಮ ಮನೆಯ ಒಂದು ವಿಚಾರ ವೈಯಕ್ತಿಕ ವಿಚಾರವಾಗಿರುವುದರಿಂದ ಈ ವಿಚಾರವಾಗಿ ನಾನು ಯಾವುದೇ ಹೇಳಿಕೆಗಳನ್ನು ನೀಡಲು ಇಷ್ಟಪಡುವುದಿಲ್ಲ ಎಂದಿದ್ದಾರೆ.

- Advertisement -

Latest News

error: Content is protected !!