ಬೆಳ್ತಂಗಡಿ : ಅಬಕಾರಿ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 11 ಅಬಕಾರಿ ನಿರೀಕ್ಷಕರನ್ನು ಉಪ ಅಧೀಕ್ಷಕರಾಗಿ ಪದೋನ್ನತಿ ನೀಡಿ ವರ್ಗಾವಣೆ ಮಾಡಿ ನ.18 ರಂದು ರಾಜ್ಯ ಸರಕಾರ ಆದೇಶಿಸಿದೆ.
ಬೆಳ್ತಂಗಡಿ ತಾಲೂಕು ವಲಯದ ಅಬಕಾರಿ ನಿರೀಕ್ಷಕರಾಗಿದ್ದ ಸೌಮ್ಯಲತಾ ಎನ್ ಇವರಿಗೆ ಪದನ್ನೋತಿ ನೀಡಿ ನ.18 ರಂದು ಮಂಗಳೂರು ಉಪವಿಭಾಗದ ಉಪ ಅಧೀಕ್ಷಕರಾಗಿ (Dy Sp of Excise) ವರ್ಗಾವಣೆ ಮಾಡಿ ಅಬಕಾರಿ ಆಯುಕ್ತರು ತಕ್ಷಣದಿಂದ ಜಾರಿಗೆ ಬರುವಂತೆ ನಿಯುಕ್ತಿಗೊಳಿಸಿ ಆದೇಶ ಮಾಡಿದ್ದಾರೆ.
ಶ್ರೀಮತಿ ಸೌಮ್ಯಲತಾ ಎನ್ ಇವರು ಮೂಲತ ಬಂಟ್ವಾಳ ತಾಲೂಕಿನ ಅಳಿಕೆ ಗ್ರಾಮದ ನೆಗಳಗುಳಿ ಶ್ರೀ ಗೋವಿಂದ ನಾಯ್ಕ ಹಾಗೂ ಸುಜಾತ ದಂಪತಿಗಳ ಪುತ್ರಿಯಾಗಿದ್ದು, ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ನಿವಾಸಿಯಾಗಿರುವ ಬೆಳ್ತಂಗಡಿಯ ನೋಟರಿ ವಕೀಲರಾದ ಸಂತೋಷ್ ಕುಮಾರ್ ಇವರ ಪತ್ನಿ ಯಾಗಿರುತ್ತಾರೆ. ಇವರಿಗೆ ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆ ಲೈಲಾ ಇಲ್ಲಿ 9ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಸಮೀಕ್ಷ ಎಸ್ ಮತ್ತು 7ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಸಂಪ್ರೀತ್ ಎಸ್ ಎಂಬ ಇಬ್ಬರು ಮಕ್ಕಳಿದ್ದಾರೆ.