Wednesday, May 8, 2024
Homeಅಪರಾಧಜೈನಧರ್ಮದ ಬಗ್ಗೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್; ಗಿರೀಶ್ ಮಟ್ಟಣ್ಣವರ್ ಮತ್ತು ರಾಧಿಕಾ ಕಾಸರಗೋಡು ವಿರುದ್ಧ...

ಜೈನಧರ್ಮದ ಬಗ್ಗೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್; ಗಿರೀಶ್ ಮಟ್ಟಣ್ಣವರ್ ಮತ್ತು ರಾಧಿಕಾ ಕಾಸರಗೋಡು ವಿರುದ್ಧ ಪ್ರಕರಣ ದಾಖಲು

spot_img
- Advertisement -
- Advertisement -

ಬೆಳ್ತಂಗಡಿ: ಮಂಗಳೂರಿನ ಯೂಟ್ಯೂಬ್ ಚಾನಲ್ ನಲ್ಲಿ ಗಿರೀಶ್ ಮಟ್ಟಣ್ಣನವರ ಸಂದರ್ಶನ ಮಾಡಿದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಜೈನ ಧರ್ಮದ ಜನರನ್ನು ನಿಂದಿಸಿದ ಘಟನೆ ನಡೆದಿದೆ.

ಮಂಗಳೂರಿನ Human Rights news word tv ಚಾನೆಲ್ ನವರು, ಗಿರೀಶ್ ಮಟ್ಟಣ್ಣನವರ್ ಸಂದರ್ಶನದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ‘ಜೈನ ಧರ್ಮದ ಜನರನ್ನು ನಿಂದಿಸಿ ವೇದವಳ್ಳಿ ಹಿಂದೂ, ಪದ್ಮ ಲತಾ ಹಿಂದೂ, ಮಾವುತ ನಾರಾಯಣ ಹಿಂದೂ, ಯಮುನಾ ಹಿಂದೂ, ಸೌಜನ್ಯ ಹಿಂದೂ, ಸತ್ತಂತಹ ಸಾಕ್ಷಿಗಳು ರವಿ ಪೂಜಾರಿ ಹಿಂದೂ ಎಲ್ಲರೂ ಹಿಂದೂಗಳೇ. ಉಳಿದವರು ಯಾರು? ಇದ್ದವರು ಯಾರು? ಜೈನರು ತಾನೆ?. ಕೊಲೆಯಾಗುತ್ತಿರುವವರು ಯಾರು? ಹಿಂದೂಗಳು, ಕೊಲೆ ಮಾಡಿಸುತ್ತಾ ಇದ್ದವರು ಯಾರು ಜೈನರು ತಾನೆ,’ ಎಂದು ಹೇಳಿಕೆ ನೀಡಿ ಒಂದು ಧರ್ಮವನ್ನು ಇನ್ನೊಂದು ಧರ್ಮದ ವಿರುದ್ಧ ಎತ್ತಿಕಟ್ಟಿ ಸಮಾಜದ ಸ್ವಾಸ್ಥವನ್ನು ಕೆಡಿಸುವ ವಿಡಿಯೋವನ್ನು ಹರಿಬಿಟ್ಟು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡುವ ಗಿರೀಶ್ ಮಟ್ಟಣ್ಣವನವರ್ ಮತ್ತು ಶ್ರೀಮತಿ ರಾಧಿಕಾ ಕಾಸರಗೋಡು ಯಾನೆ ಅನಿತಾ ಕಾಸರಗೋಡು ಕೂಡಾ ಶ್ರೀ ಕ್ಷೇತ್ರ ಧರ್ಮಸ್ಥಳದ ಬಗ್ಗೆ ಅಲ್ಲಿ ಅಡಳಿತ ನಡೆಸುತ್ತಿರುವ ಜೈನ ಧರ್ಮಿಯರಾದ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಬಗ್ಗೆ ಅವರ ಕುಟುಂಬದ ಬಗ್ಗೆ ಹಾಗೂ ಜೈನ ಧರ್ಮದ ಆಚರಣೆಯ ಬಗ್ಗೆ ಸದಾ ಅವಹೇಳಕಾರಿಯಾಗಿ ಮಾತಾನಾಡಿರುವ ಅವರುಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ಭಾರತೀಯ ಜೈನ್ ಮಿಲನ್ ಅಧ್ಯಕ್ಷರಾದ ಡಾ.ನವೀನ್ ಕುಮಾರ್ ಮತ್ತು ಸದಸ್ಯರು ದೂರು ನೀಡಿದ್ದರು. ಅದರಂತೆ ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಬೆಳ್ತಂಗಡಿಯಲ್ಲಿ ಎಫ್ಐಆರ್ ದಾಖಲು: ಭಾರತೀಯ ಜೈನ್ ಮಿಲನ್ ಅಧ್ಯಕ್ಷರು ದೂರು ನೀಡಿದ ಹಿನ್ನಲೆಯಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ನ.18 ರಂದು ಆರೋಪಿಗಳಾದ A-1 ಗಿರೀಶ್ ಮಟ್ಟಣ್ಣವರು ಮತ್ತು A-2 ರಾಧಿಕಾ ಕಾಸರಗೋಡು ವಿರುದ್ಧ ಐಪಿಸಿ 1860 (u/s -153A,298) ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

- Advertisement -
spot_img

Latest News

error: Content is protected !!