Thursday, June 4, 2026
Homeಕರಾವಳಿಉಡುಪಿಕಾರ್ಕಳ: ಮಂಗಳೂರು ಬಳಿ ಇದೇ ವರ್ಷ ಅಂತಾರಾಷ್ಟ್ರೀಯ ಮಟ್ಟದ ಫರ್ನೀಚರ್ ಕ್ಲಸ್ಟರ್ ಪ್ರಾರಂಭ : ಸಿಎಂ...

ಕಾರ್ಕಳ: ಮಂಗಳೂರು ಬಳಿ ಇದೇ ವರ್ಷ ಅಂತಾರಾಷ್ಟ್ರೀಯ ಮಟ್ಟದ ಫರ್ನೀಚರ್ ಕ್ಲಸ್ಟರ್ ಪ್ರಾರಂಭ : ಸಿಎಂ ಭರವಸೆ

- Advertisement -
- Advertisement -

ಕಾರ್ಕಳ: ಯುವಕರಿಗೆ ಉದ್ಯೋಗ ಒದಗಿಸುವಂತಹ ಅಂತಾರಾಷ್ಟ್ರೀಯ ಮಟ್ಟದ ಫರ್ನೀಚರ್ ಕ್ಲಸ್ಟರ್ ನ್ನು ಮಂಗಳೂರು ಸಮೀಪದಲ್ಲಿ ಇದೇ ವರ್ಷ ಪ್ರಾರಂಭಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಕಾರ್ಕಳ ತಾಲ್ಲೂಕಿನ ಎಣ್ಣಿ ಹೊಳೆಯ ಬಳಿ ಎಣ್ಣೆಹೊಳೆ ಏತ ನೀರಾವರಿ ಯೋಜನೆ ಯನ್ನು ಉದ್ಘಾಟಿಸಿ ಮಾತನಾಡಿದರು. ಕರಾವಳಿ ಪ್ರದೇಶದಲ್ಲಿ ಗ್ರೀನ್ ಪವರ್ ಅಭಿವೃದ್ಧಿ, ಹಸಿರು ಇಂಧನ ಆಧಾರಿತ ಕೈಗಾರಿಕಾ ಹಬ್ ನಿರ್ಮಿಸಲು ತೀರ್ಮಾನ ಮಾಡಲಾಗಿದೆ. ಶಿಲ್ಪಿಗಳು, ಮರದ ಕೆಲಸ ಮಾಡುವವರಿಗೆ ಕ್ಲಸ್ಟರ್ ನ್ನು ಸ್ಥಾಪಿಸಲು ಶೀಘ್ರದಲ್ಲಿಯೇ ಅನುಮೋದನೆ ನೀಡಲಾಗುವುದು. ಈ ರೀತಿ ಸಮಗ್ರ, ಸಶಕ್ತ, ಸಮೃದ್ಧಿ ಕರ್ನಾಟಕ ಕಟ್ಟುವ ಬದ್ಧತೆ ಸರ್ಕಾರ ತೋರುತ್ತಿದೆ ಎಂದರು.

.

- Advertisement -

Latest News

error: Content is protected !!