Saturday, September 12, 2026
Homeಕರಾವಳಿಕೊಣಾಜೆ: ಗುಳಿಗಜ್ಜನ ಕಟ್ಟೆ ಮುಂದೆ ಚಪ್ಪಲಿ ಧರಿಸಿ ತ್ರಿಶೂಲ ಹಿಡಿದು ನಿಂತ ಸ್ಟೇಟಸ್ ಹಾಕಿ ವಿಕೃತಿ...

ಕೊಣಾಜೆ: ಗುಳಿಗಜ್ಜನ ಕಟ್ಟೆ ಮುಂದೆ ಚಪ್ಪಲಿ ಧರಿಸಿ ತ್ರಿಶೂಲ ಹಿಡಿದು ನಿಂತ ಸ್ಟೇಟಸ್ ಹಾಕಿ ವಿಕೃತಿ ಮೆರೆದ ದುಷ್ಕರ್ಮಿ

- Advertisement -
- Advertisement -

ಕೊಣಾಜೆ: ಗುಳಿಗಜ್ಜನ ಕಟ್ಟೆ ಮುಂದೆ ಚಪ್ಪಲಿ ಧರಿಸಿ ತ್ರಿಶೂಲ ಹಿಡಿದು ನಿಂತ ಸ್ಟೇಟಸ್ ಹಾಕಿ ವಿಕೃತಿ ಮೆರೆದ ಘಟನೆ ನಡೆದಿದ್ದು, ಆತನನ್ನು ಕೊಣಾಜೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಯನ್ನು ಅಸೈಗೋಳಿಯ ಸಲೂನ್ ಒಂದರಲ್ಲಿ ಕ್ಷೌರಿಕನಾಗಿರುವ ಉತ್ತರ ಭಾರತ ಮೂಲದ ಆದಿಲ್‌ ಆಯಾನ್ ಖಾನ್ ಎಂದು ಗುರುತಿಸಲಾಗಿದೆ.

ಕಟ್ಟೆಯ ಎದುರು ನಿಂತು ಚಪ್ಪಲಿ ಧರಿಸಿ ದೈವದ ತ್ರಿಶೂಲ ಹಿಡಿದು ನಿಂತು ಫೋಟೊ ತೆಗೆಸಿಕೊಂಡಿದ್ದು ತನ್ನ ಮೊಬೈಲ್ಲಿ ಸ್ಟೇಟಸ್ ಹಾಕಿದ್ದನೆನ್ನಲಾಗಿದೆ. ಇದೀಗ ಆತ ದೈವಕ್ಕೆ ಅಪಚಾರವೆಸಗಿದ ಸ್ಟೇಟಸ್ ಫೋಟೊ ವೈರಲ್ ಆಗಿದೆ. ಕೊಣಾಜೆ ಪೊಲೀಸರು ಆರೋಪಿ ಆಯಾನ್ ಖಾನ್ ನನ್ನು ವಶಕ್ಕೆ ತೆಗೆದು ವಿಚಾರಣೆ ನಡೆಸುತ್ತಿದ್ದಾರೆ.

ಈ ನಡುವೆ ಕೆಲವು ಸ್ಥಳೀಯ ಯುವಕರು ತಾವು ಹಿಂದು ಸಂಘಟನೆಯವರೆಂದು ಹೇಳಿ ದೈವ ನಿಂದನೆಯ ಸ್ಟೇಟಸ್ ಮುಂದಿಟ್ಟು ಕ್ಷೌರಿಕ ಆಯಾನ್ ನನ್ನ ಹಣಕ್ಕಾಗಿ ಬ್ಲಾಕ್ ಮೇಲ್ ಮಾಡಿದ್ದಾರೆ ಎನ್ನುವ ಮಾಹಿತಿಗಳಿದ್ದು,ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!