Saturday, June 6, 2026
Homeಕರಾವಳಿಮಂಗಳೂರು ವಿವಿ ವಿಸಿ ಪ್ರೊ. ಯಡಪಡಿತ್ತಾಯ ಅವರಿಗೆ 2022 ರ ಅತ್ಯುತ್ತಮ ವಿಸಿ ಪ್ರಶಸ್ತಿ.

ಮಂಗಳೂರು ವಿವಿ ವಿಸಿ ಪ್ರೊ. ಯಡಪಡಿತ್ತಾಯ ಅವರಿಗೆ 2022 ರ ಅತ್ಯುತ್ತಮ ವಿಸಿ ಪ್ರಶಸ್ತಿ.

- Advertisement -
- Advertisement -

ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಪಿ.ಎಸ್. ಯಡಪಡಿತ್ತಾಯ ಅವರಿಗೆ 2022 ರ ಅತ್ಯುತ್ತಮ ಕುಲಪತಿ ಗೌರವ ಸಂದಿದೆ.

ಯೂನಿವರ್ಸಲ್ ಮೆಂಟರ್ ಅಸೋಸಿಯೇಷನ್ ಮತ್ತು ಬ್ರೈನ್ ವಂಡರ್ಸ್ ಸಹಯೋಗದಲ್ಲಿ ನಿನ್ನೆ ನವದೆಹಲಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ.

ನವದೆಹಲಿಯಲ್ಲಿ ನಿ‌ನ್ನೆ ನಡೆದ ಎರಡನೇ ಉನ್ನತ ಶಿಕ್ಷಣದ ಆವಿಷ್ಕಾರ ಮತ್ತು ತಂತ್ರಜ್ಞಾನ ಶೃಂಗಸಭೆಯಲ್ಲಿ ಪ್ರೊ. ಪಿ.ಎಸ್. ಎಡಪಡಿತ್ತಾಯ ಪ್ರಶಸ್ತಿ ಸ್ವೀಕರಿಸಿದರು.

ದೇಶದ ಟಾಪ್ 50 ಕುಲಪತಿಗಳ ಪೈಕಿ ಪ್ರೊ. ಎಡಪಡಿತ್ತಾಯ ಅವರಿಗೆ 2022 ರ ವರ್ಷದ ಕುಲಪತಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ವಿಶ್ವವಿದ್ಯಾಲಯದಲ್ಲಿನ ವಿವಿಧ ಶೈಕ್ಷಣಿಕ ಚಟುವಟಿಕೆಗಳು ಮತ್ತು ಕೋವಿಡ್ ಸಮಯದಲ್ಲಿ ತೆಗೆದುಕೊಂಡ ಕ್ರಮಗಳನ್ನು ಪರಿಗಣಿಸಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

- Advertisement -

Latest News

error: Content is protected !!