Thursday, June 4, 2026
Homeತಾಜಾ ಸುದ್ದಿಭಾರೀ ಮಳೆಗೆ ಜಲಾವೃತ್ತವಾದ ನಟ ಜಗ್ಗೇಶ್ ಮನೆ

ಭಾರೀ ಮಳೆಗೆ ಜಲಾವೃತ್ತವಾದ ನಟ ಜಗ್ಗೇಶ್ ಮನೆ

- Advertisement -
- Advertisement -

ಬೆಂಗಳೂರು; ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಅನೇಕ ಕಡೆಗಳಲ್ಲಿ ಬೆಳೆ ಹಾನಿಯಾಗಿದ್ದು, ಕೆಲವು ಕಡೆ ಮನೆಗಳಿಗೆ ನೀರು ನುಗ್ಗಿ ಜಲಾವೃತವಾಗಿವೆ. ರಾಜ್ಯ ಸಭಾ ಸದಸ್ಯ, ನಟ ಜಗ್ಗೇಶ್ ಸಹ ಮಳೆಯ ಅವಾಂತರಕ್ಕೆ ಪರದಾಡುವಂತಾಗಿದೆ.

ನವರಸನಾಯಕ ಜಗ್ಗೇಶ್ ಅವರ ಮಾಯಸಂದ್ರದ ಮನೆಗೆ ನೀರು ನುಗ್ಗಿದ್ದು, ಈ ಕುರಿತು ಜಗ್ಗೇಶ್ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

150ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ನಟಿಸಿರುವ ಜಗ್ಗೇಶ್ ಈಗ ರಾಜ್ಯಸಭಾ ಸದಸ್ಯರಾಗಿ ಸಹ ಕಾರ್ಯ ನಿರ್ವಹಿಸುತ್ತಿದ್ದಾರೆ. ರಾಜ್ಯದಲ್ಲಿ ಸುರಿಯುತ್ತಿರುವ ಮಳೆಯ ಪರಿಣಾಮ ಜಗ್ಗೇಶ್‌ ಅವರ ಮನೆಗೆ ಸಹ ನೀರು ನುಗ್ಗಿದ್ದು, ಸಂಪೂರ್ಣ ಜಲಾವೃತವಾಗಿದೆ. ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ಇದಕ್ಕೆ ಕಮೆಂಟ್ ಮಾಡಿರುವ ಸಾರ್ವಜನಿಕರು ಒಬ್ಬ ನಟ, ರಾಜಕಾರಣಿಗೆ ಈ ಪಾಡಾದ್ರೆ ಸಾಮಾನ್ಯರ ಗತಿಯೇನು ಎಂದು ಪ್ರಶ್ನಿಸಿದ್ದಾರೆ.

- Advertisement -

Latest News

error: Content is protected !!