Thursday, May 16, 2024
Homeತಾಜಾ ಸುದ್ದಿಕಿಲ್ಲರ್ ಕೊರೋನಾಗೆ ಕನ್ನಡ ಚಿತ್ರರಂಗದಲ್ಲಿ ಮೊದಲ ಬಲಿ: ಖ್ಯಾತ ನಿರ್ಮಾಪಕ ಸಾವು..

ಕಿಲ್ಲರ್ ಕೊರೋನಾಗೆ ಕನ್ನಡ ಚಿತ್ರರಂಗದಲ್ಲಿ ಮೊದಲ ಬಲಿ: ಖ್ಯಾತ ನಿರ್ಮಾಪಕ ಸಾವು..

spot_img
- Advertisement -
- Advertisement -

ಬೆಂಗಳೂರು: ಕೊರೊನಾ ಮಹಾಮಾರಿ ಯಾರ ಮೇಲೂ ಕರುಣೆ ತೋರದೆ ಅಟ್ಟಹಾಸ ಮೆರೀತಿದೆ. ಈಗಾಗಲೇ ವಿಶ್ವಾದ್ಯಂತ ಲಕ್ಷಾಂತರ ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಇದೀಗ ಈ ಸೋಂಕಿಗೆ ಸ್ಯಾಂಡಲ್ ವುಡ್ ನಲ್ಲಿ ಮೊದಲ ಬಲಿಯಾಗಿದ್ದು, ಗ್ರಾಮಾಯಣ ಸಿನಿಮಾ ನಿರ್ಮಾಪಕ ಎನ್.ಎಲ್.ಎನ್ ಮೂರ್ತಿ (39) ಅವರು ಸಾವನ್ನಪ್ಪಿದ್ದಾರೆ.

ವಿನಯ್ ರಾಜ್ ಕುಮಾರ್ ನಟನೆಯ ಗ್ರಾಮಾಯಣ ಸಿನಿಮಾ ನಿರ್ಮಾಪಕ ಮೂರ್ತಿ ಅವರ ತಾಯಿ ಕೆಲ ದಿನಗಳ ಹಿಂದೆ ಕೊರೊನಾ ವೈರಸ್ ನಿಂದಾಗಿ ಸಾವನ್ನಪ್ಪಿದ್ದರು. ತಾಯಿ ಸಾವಿನಿಂದ ನೊಂದಿದ್ದ ನಿರ್ಮಾಪಕ ಕಡಿಮೆ ರಕ್ತದೊತ್ತಡದಿಂದ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.

ಬಳಿಕ ನಿರ್ಮಾಪಕ ಮೂರ್ತಿ ಮೃತದೇಹವನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಿದಾಗ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ ಎಂದು ಬಿಜಿಎಸ್ ವೈದ್ಯರು ಸ್ಪಷ್ಟಪಡಿಸಿದ್ದಾರೆ.

ಮೃತ ಮೂರ್ತಿ, ಪತ್ನಿ ಆರ್‌. ಲತಾ, ಮಗ ಮತ್ತು ಮಗಳನ್ನು ಅಗಲಿದ್ದಾರೆ. ಇಂದು ಬನಶಂಕರಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ರಂಗಭೂಮಿಯಲ್ಲೂ ಸಕ್ರಿಯರಾಗಿದ್ದ ಮೂರ್ತಿ ಸಿನಿಮಾ ರಂಗದ ಮೇಲಿನ ಆಸಕ್ತಿಯಿಂದಾಗಿ ಚಿತ್ರ ನಿರ್ಮಾಣಕ್ಕೆ ಇಳಿದಿದ್ದರು.‌ ಹಾಗೂ “ಗ್ರಾಮಾಯಣ’ ಚಿತ್ರದ ಚಿತ್ರೀಕರಣ ಆರಂಭಿಸುವ ತಯಾರಿಯನ್ನೂ ಮಾಡಿಕೊಂಡಿದ್ದರು.

ಅಲ್ಲದೇ “ಇತ್ಯರ್ಥ’ ಚಿತ್ರಕ್ಕೂ ಮೂರ್ತಿ ಬಂಡವಾಳ ಹೂಡಿದ್ದರು. ಈ ಚಿತ್ರವನ್ನು ಎ.ಜಿ. ಶೇಷಾದ್ರಿ ನಿರ್ದೇಶನ ಮಾಡಿದ್ದು, ಚಿತ್ರ ಬಿಡುಗಡೆಯಾಗುವ ಹಂತದಲ್ಲಿತ್ತು.

- Advertisement -
spot_img

Latest News

error: Content is protected !!