Thursday, June 4, 2026
Homeಉದ್ಯಮಭಾನುವಾರ ಲಾಕ್ ಡೌನ್: ನಾಳೆ 'ಮದ್ಯ' ಮಾರಾಟ ಸಂಪೂರ್ಣ ಬಂದ್

ಭಾನುವಾರ ಲಾಕ್ ಡೌನ್: ನಾಳೆ ‘ಮದ್ಯ’ ಮಾರಾಟ ಸಂಪೂರ್ಣ ಬಂದ್

- Advertisement -
- Advertisement -

ಬೆಂಗಳೂರು: ಕೊರೊನಾ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಇಂದು ರಾತ್ರಿ 8 ಗಂಟೆಯಿಂದ ಸೋಮವಾರ ಬೆಳಗ್ಗೆ 5 ಗಂಟೆಯವರೆಗೆ ಇಡೀ ಕರ್ನಾಟಕ ಸಂಪೂರ್ಣ ಲಾಕ್ಡೌನ್ ಆಗಲಿದೆ.

ಅಗತ್ಯ ಸೇವೆಗಳನ್ನು ಹೊರತುಪಡಿಸಿ ಇತರೆಲ್ಲಾ ವಹಿವಾಟುಗಳಿಗೆ ನಿಷೇಧವಿದ್ದು, ಹೀಗಾಗಿ ಭಾನುವಾರವಾದ ನಾಳೆ ಮದ್ಯ ಮಾರಾಟ ಸಂಪೂರ್ಣ ಬಂದ್ ಆಗಲಿದೆ.

ಅಗತ್ಯ ವಸ್ತುಗಳಾದ ಹಾಲು, ದಿನಸಿ, ತರಕಾರಿ ಮಾರಾಟಕ್ಕೆ ಅನುಮತಿ ನೀಡಲಾಗಿದ್ದು, ಔಷಧ ಅಂಗಡಿಗಳು ತೆರದಿರಲಿವೆ. ಇನ್ನುಳಿದಂತೆ ಇಂದು ರಾತ್ರಿಯಿಂದಲೇ ಸಾರ್ವಜನಿಕರ ಅನಗತ್ಯ ಸಂಚಾರಕ್ಕೆ ಕಡಿವಾಣ ಹಾಕಲಾಗುತ್ತದೆ.

- Advertisement -

Latest News

error: Content is protected !!