Thursday, June 4, 2026
Homeತಾಜಾ ಸುದ್ದಿಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣ: ಡ್ರಗ್ ಪೆಡ್ಲರ್ ರಾಹುಲ್ ಶೆಟ್ಟಿ ಜೊತೆ ಕನ್ನಡದ ಖ್ಯಾತ ನಿರ್ಮಾಪಕರಿರುವ...

ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣ: ಡ್ರಗ್ ಪೆಡ್ಲರ್ ರಾಹುಲ್ ಶೆಟ್ಟಿ ಜೊತೆ ಕನ್ನಡದ ಖ್ಯಾತ ನಿರ್ಮಾಪಕರಿರುವ ಫೋಟೋ ವೈರಲ್

- Advertisement -
- Advertisement -

ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣ ದಿನಕ್ಕೊಂದು ರೋಚಕ ತಿರುವು ಪಡೆದುಕೊಳ್ತಿದೆ. ದಿನಕ್ಕೊಂದು ಹೊಸ ಹೊಸ ಹೆಸರುಗಳು ಪ್ರಕರಣದಲ್ಲಿ ಥಳುಕು ಹಾಕಿಕೊಳ್ಳುತ್ತಲೇ ಇದೆ. ಇದೀಗ ಕನ್ನಡದ ಖ್ಯಾತ ನಿರ್ಮಾಪಕರಾದ ಕೆ. ಮಂಜು ಅವರು ರಾಹುಲ್ ಶೆಟ್ಟಿ ಜೊತೆಗಿರುವ ಫೋಟೋವೊಂದು ಸದ್ದು ಮಾಡುತ್ತಿದೆ. ಕೆ. ಮಂಜು ರಾಹುಲ್ ಅವರಿಗೆ ಊಟ ಮಾಡಿಸುತ್ತಿರುವ ಫೋಟೋ ವೈರಲ್ ಆಗಿದೆ.

ಆದ್ರೆ ಈ ಬಗ್ಗೆ ಖಾಸಗಿ ವಾಹಿನಿಯೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಕೆ.ಮಂಜು ಅವರು ರಾಹುಲ್ ಒಳ್ಳೆ ಹುಡುಗ. ನನಗೆ 15 ವರ್ಷಗಳಿಂದ ಪರಿಚಯ. ಪಾರ್ಟಿಯಲ್ಲಿ ನನಗೆ ಸಂಜನಾ ಜೊತೆ ಸಿಕ್ಕಿದ್ದ. ನನಗೆ ಊಟ ಮಾಡಿಸಿ ಅಣ್ಣ ಅಂದ. ಹಾಗಾಗಿ ನಾನು ಅವನಿಗೆ ಊಟ ಮಾಡಿಸಿದೆ ಅಷ್ಟೇ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಬಹುತೇಕ ಸ್ಟಾರ್ ನಟ ನಟಿಯರ ಜೊತೆ ರಾಹುಲ್ ಗುರುತಿಸಿಕೊಂಡಿರೋದು ಎಲ್ಲರಿಗೂ ತಲೆ ನೋವನ್ನು ತಂದೊಡ್ಡಿದೆ.

- Advertisement -

Latest News

error: Content is protected !!