Friday, March 29, 2024
Homeಕರಾವಳಿಸಂತ ಅಲೋಶಿಯಸ್ ಕಾಲೇಜಿನಲ್ಲಿ “ನಾ ಕಂಡ ಬಿ.ವಿ.ಕಾರಂತರು” ವಿಷಯ ಸಂವಾದ

ಸಂತ ಅಲೋಶಿಯಸ್ ಕಾಲೇಜಿನಲ್ಲಿ “ನಾ ಕಂಡ ಬಿ.ವಿ.ಕಾರಂತರು” ವಿಷಯ ಸಂವಾದ

spot_img
- Advertisement -
- Advertisement -

ಮಂಗಳೂರು: ಸಂತ ಅಲೋಶಿಯಸ್ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಹಾಗೂ ಜರ್ನಿ ಥಿಯೇಟರ್ ಗ್ರೂಪ್ ಮಂಗಳೂರು ಇವುಗಳ ಜಂಟಿ ಆಶ್ರಯದಲ್ಲಿ ಬಿ. ವಿ. ಕಾರಂತರ ಜನ್ಮದಿನದ ಪ್ರಯುಕ್ತ ನಾ ಕಂಡ ಬಿ.ವಿ.ಕಾರಂತರು ಎಂಬ ವಿಷಯದಲ್ಲಿ ಸಂವಾದ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ರಂಗಾಯಣ ಕಲಾವಿದ ಎಸ್‌ ರಾಮು ಆಗಮಿಸಿದ್ದರು. ‌‌ಈ ಸಂದರ್ಭದಲ್ಲಿ ಮಾತನಾಡಿದ ಅವರು,  ರಂಗಾಯಣದ ಬಹುತೇಕ ಕಲಾವಿದರ ಪಾಲಿಗೆ ಕಾರಂತರು, ಎರಡನೆಯ ತಂದೆ ಇದ್ದಂತೆ. ನಾನಾ ಜಿಲ್ಲೆಗಳ ಕಲಾವಿದರ ನಡುವಿನ ಕೊಡುಕೊಳ್ಳುವಿಕೆ, ಜೊತೆಗೆ ಕೂಡಿ ಬದುಕುವುದು, ಹೊಂದಾಣಿಕೆ ಎಲ್ಲವನ್ನೂ ನಮಗೆ ಕಲಿಸಿಕೊಟ್ಟವರು. ಜೊತೆಗೆ ಕಲಾವಿದರಲ್ಲಿ ಓದುವ ಹವ್ಯಾಸ ಹಾಗೂ ಓದಲು ಪ್ರೇರೆಪಿಸಿದವರೆಂದರೆ ಬಿ.ವಿ. ಕಾರಂತರು ಎಂದರು.

ರಂಗಭೂಮಿಗೆ ಇವರು ನೀಡಿರುವ ಸಂಗೀತದ ಕೊಡುಗೆಗೆ ಸೆಪ್ಟಂಬರ್ ೧೯, ಅವರ ಜನ್ಮದಿವನ್ನು ರಂಗ ಸಂಗೀತ ದಿನಾಚರಣೆಯಾಗಿ, ಸಂಭ್ರಮಿಸುತ್ತಿದ್ದಾರೆ. ಕಾರ್ಯಕ್ರಮದಲ್ಲಿ ಜರ್ನಿ ಥಿಯೇಟರ್ ಗ್ರೂಪ್‌ನ ಪದಾಧಿಕಾರಿಗಳು ಹಾಗೂ ಸದಸ್ಯರು ಮತ್ತು ಕಾಲೇಜಿನ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!