Thursday, May 16, 2024
Homeಮಹಾನ್ಯೂಸ್ಟ್ವಿಟರ್ ನಲ್ಲಿ ಹೊಸ ದಾಖಲೆ ನಿರ್ಮಿಸಿದ ಪ್ರಧಾನಿ ಮೋದಿಯವರ ಆ ಫೋಟೋ...

ಟ್ವಿಟರ್ ನಲ್ಲಿ ಹೊಸ ದಾಖಲೆ ನಿರ್ಮಿಸಿದ ಪ್ರಧಾನಿ ಮೋದಿಯವರ ಆ ಫೋಟೋ…

spot_img
- Advertisement -
- Advertisement -

ನವದೆಹಲಿ: ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಕೊರೊನಾ ವಾರಿಯರ್ಸ್ ಗೆ ಧನ್ಯವಾದ ತಿಳಿಸಲು ಏಪ್ರಿಲ್ ತಿಂಗಳಿನಲ್ಲಿ ದೀಪ ಹಚ್ಚುವಂತೆ ದೇಶದ ಜನತೆಗೆ ಕರೆ ನೀಡಿದ್ದರು. ಏಪ್ರಿಲ್ 5 ರಂದು 9 ಗಂಟೆಗೆ ಸರಿಯಾಗಿ ದೀಪ ಹಚ್ಚುವಂತೆ ದೇಶದ ಸಮಗ್ರ ಜನತೆಗೆ ಮೋದಿ ಕರೆ ನೀಡಿದ್ದರು.

ಅಂದು ಪ್ರಧಾನಿ ಮೋದಿಯವರು ತಾವು ದೀಪ ಹಚ್ಚುವ ಫೋಟೋವೊಂದನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದರು. ಈ ಟ್ವೀಟ್ ಇದೀಗ ಹೊಸ ದಾಖಲೆ ಬರೆದಿದೆ.ಮೋದಿಯವರ ಟ್ವೀಟ್ ನ್ನು 1 ಲಕ್ಷದ 18 ಸಾವಿರ ಮಂದಿ ರಿ ಟ್ವೀಟ್ ಮಾಡಿದ್ದಾರೆ.

ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಏಪ್ರಿಲ್ 5 ರಂದು ರಾಜಕೀಯ ನಾಯಕರು, ಸಿನಿಮಾ ಗಣ್ಯರು ಸೇರಿದಂತೆ ಅನೇಕರು ದೀಪ ಬೆಳಗಿಸುವ ಫೋಟೋವನ್ನು ಹಂಚಿಕೊಂಡಿದ್ದರು. ಜನಸಾಮಾನ್ಯರು ಕೂಡ ಪ್ರಧಾನಿ ಮಾತಿಗೆ ಬೆಲೆಕೊಟ್ಟು ದೀಪ ಬೆಳಗಿಸಿದ್ದರು.

- Advertisement -
spot_img

Latest News

error: Content is protected !!