Sunday, June 7, 2026
Homeತಾಜಾ ಸುದ್ದಿಏಷ್ಯಾದ ಮೊದಲ ಗಾರ್ಡನ್‌ ಟರ್ಮಿನಲ್‌ ಲೋಕಾರ್ಪಣೆಗೊಳಿಸಿದ ಪ್ರಧಾನಿ ಮೋದಿ

ಏಷ್ಯಾದ ಮೊದಲ ಗಾರ್ಡನ್‌ ಟರ್ಮಿನಲ್‌ ಲೋಕಾರ್ಪಣೆಗೊಳಿಸಿದ ಪ್ರಧಾನಿ ಮೋದಿ

- Advertisement -
- Advertisement -

ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ  ನಿರ್ಮಾಣವಾಗಿರುವ ಏಷ್ಯಾದ ಮೊದಲ ಗಾರ್ಡನ್‌ ಟರ್ಮಿನಲ್‌ ಲೋಕಾರ್ಪಣೆ ಮಾಡಿದ್ದಾರೆ.

ಜಾಗತಿಕ ಮಟ್ಟದಲ್ಲಿ ಪ್ರಸಿದ್ಧಿ ಹೊಂದಿರುವ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವರ್ಷಕ್ಕೆ ಲಕ್ಷಾಂತರ ಜನ ಪ್ರಯಾಣಿಸುತ್ತಾರೆ. ಹಾಗಾಗಿ ವಿಮಾನ ನಿಲ್ದಾಣ ತನ್ನ ಸಾಮರ್ಥ್ಯ ಹೆಚ್ಚಿಸಲು ಮುಂದಾಗಿ ಇದೀಗ ಟರ್ಮಿನಲ್-2 ಸಿದ್ಧಗೊಂಡಿದೆ. ಎರಡನೇ ಟರ್ಮಿನಲ್‌ನ ಮೊದಲ ಹಂತದ ನಿರ್ಮಾಣದ ಅಂದಾಜು ವೆಚ್ಚ 13,000 ಕೋಟಿ ರೂ. ಆಗಿದ್ದು ಈ ಟರ್ಮಿನಲ್ ಸರಿಸುಮಾರು 2.5 ಲಕ್ಷ ಚದರ ಮೀಟರ್‌ನ ಬಿಲ್ಟ್-ಅಪ್ ಪ್ರದೇಶವನ್ನು ಹೊಂದಿದೆ. ಎರಡನೇ ಹಂತದಲ್ಲಿ ಈ ಟರ್ಮಿನಲ್‌ಗೆ ಇನ್ನೂ 4.41 ಲಕ್ಷ ಚ.ಮೀ ಹೊಸದಾಗಿ ಸೇರ್ಪಡೆಗೊಳ್ಳಲಿದೆ.

- Advertisement -

Latest News

error: Content is protected !!