Thursday, May 23, 2024
Homeಕರಾವಳಿಮಂಗಳೂರು: ವೈದ್ಯರ ನಿರ್ಲಕ್ಷ್ಯಕ್ಕೆ ಮೆದುಳು ನಿಷ್ಕ್ರೀಯಗೊಂಡು ಗರ್ಭಿಣಿ ಸಾವು ಆರೋಪ

ಮಂಗಳೂರು: ವೈದ್ಯರ ನಿರ್ಲಕ್ಷ್ಯಕ್ಕೆ ಮೆದುಳು ನಿಷ್ಕ್ರೀಯಗೊಂಡು ಗರ್ಭಿಣಿ ಸಾವು ಆರೋಪ

spot_img
- Advertisement -
- Advertisement -

ಮಂಗಳೂರು: ವೈದ್ಯರ ನಿರ್ಲಕ್ಷ್ಯಕ್ಕೆ ಮೆದುಳು ನಿಷ್ಕ್ರೀಯಗೊಂಡು ಗರ್ಭಿಣಿ ಸಾವನ್ನಪ್ಪಿರುವ ಆರೋಪ ಕೇಳಿ ಬಂದಿದೆ.

ವೇಣೂರಿನ ಶಿಲ್ಪಾ ಎಂಬಾಕೆಯು ತನ್ನ ಎರಡನೇ ಮಗುವಿನ ಹೆರಿಗೆಗಾಗಿ ಜುಲೈ 2ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಶಸ್ತ್ರಚಿಕಿತ್ಸೆಯ ಮೂಲಕ ಹೆಣ್ಣು ಮಗುವನ್ನು ಹೊರತೆಗೆದರೂ ಗರ್ಭಕೋಶದಲ್ಲಿ ಸಮಸ್ಯೆ ಇದೆ ಎಂದು ಹೇಳಿ ಬಳಿಕ ಅದರ ನಿವಾರಣೆಯ ಸಂದರ್ಭ ರಕ್ತಸ್ರಾವಾಗಿದೆ ಎನ್ನಲಾಗಿದೆ. ರಕ್ತದೊತ್ತಡದ ಏರಿಳಿತದಿಂದ ಸಮಸ್ಯೆ ಉಲ್ಬಣಗೊಂಡು ಮೆದುಳು ನಿಷ್ಕ್ರಿಯಗೊಂಡು ಕೋಮಾಕ್ಕೆ ತಲುಪಿದ್ದರು ಎಂದು ಆರೋಪಿಸಲಾಗಿದೆ

ಆರೋಗ್ಯವಂತ ಗರ್ಭಿಣಿಗೆ ಆದ ಅನ್ಯಾಯಕ್ಕೆ ಯಾರು ಹೊಣೆ? ಇಂತಹ ಹಲವು ಪ್ರಕರಣಗಳು ಮೆಡಿಕಲ್ ಕಾಲೇಜು ಆಸ್ಪತ್ರೆಗಳಲ್ಲಿ ನಡೆಯುತ್ತಿದೆ. ಈ ಪ್ರಕರಣವನ್ನು ಜಿಲ್ಲಾಡಳಿತ, ಆರೋಗ್ಯ ಇಲಾಖೆಯು ಗಂಭೀರವಾಗಿ ಪರಿಗಣಿಸಿ ಸಮಗ್ರ ತನಿಖೆ ನಡೆಸಬೇಕು. ತಪ್ಪಿತಸ್ಥ ವೈದ್ಯರ ವಿರುದ್ಧ ಮತ್ತು ಜವಾಬ್ದಾರಿ ಮರೆತ ಆಸ್ಪತ್ರೆಯ ವಿರುದ್ಧ ಸೂಕ್ತ ಕ್ರಮಕೂಗೊಳ್ಳಬೇಕು  ದ.ಕ.ಜಿಲ್ಲಾ ಡಿವೈಎಫ್‌ಐ ಎಂದು ಒತ್ತಾಯಿಸಿದೆ..

- Advertisement -
spot_img

Latest News

error: Content is protected !!