ದಕ್ಷಿಣ ಕನ್ನಡ : ರಾಜ್ಯದ್ಯಂತ ಮಾರಕ ಕೊರೊನಾ ವೈರಸ್ ಆತಂಕ ತಂದೊಡ್ಡಿದ್ದು, ಜನತೆ ತತ್ತರಿಸಿದ್ದಾರೆ. ಸೋಂಕು ನಿಯಂತ್ರಣಕ್ಕೆ ಲಾಕ್ ಡೌನ್ ಘೋಷಿಸಿ ಅಗತ್ಯ ಕ್ರಮ ಕೈಗೊಂಡಿದ್ದರೂ ದಿನೇ ದಿನೇ ಸೋಂಕುಪೀಡಿತರ ಸಂಖ್ಯೆ ಹೆಚ್ಚಳವಾಗುತ್ತಿದೆ. ಲಾಕ್ ಡೌನ್ ನಿಂದಾಗಿ ಕೇರಳದಲ್ಲಿ ಸಿಲುಕಿದ್ದ ತುಂಬು ಗರ್ಭಿಣಿ ಸಂಕಷ್ಟದಲ್ಲಿದ್ದು, 142 ಕಿ.ಮೀ ಕಾಲ್ನಡಿಗೆಯಲ್ಲೇ ಕ್ರಮಿಸಿ ಮಂಗಳೂರು ಸಮೀಪದ ತಲಪಾಡಿ ತಲುಪಿದ್ದಾರೆ.
ಬೆಳಗಾವಿ ಮೂಲದ ಸುಮಾರು 8 ಕಾರ್ಮಿಕರ ತಂಡ ಕೆಲಸದ ನಿಮಿತ್ತ ಕೇರಳದ ಕಣ್ಣೂರಿಗೆ ಧಾವಿಸಿದ್ದರು. ಈ ಮಧ್ಯೆ, ಮಾರಕ ಸೋಂಕು ಹಿನ್ನೆಲೆಯಲ್ಲಿ ಲಾಕ್ ಡೌನ್ ಘೋಷಣೆಯಾಗಿ ಕೆಲಸವಿಲ್ಲದೇ ಈ ಕಾರ್ಮಿಕರು ತೊಂದರೆಗೀಡಾದರು. ಅತ್ತ ಕಣ್ಣೂರಿನಲ್ಲೂ ತಂಗಲಾರದೇ, ಇತ್ತ ಬೆಳಗಾವಿಗೂ ತೆರಳಲಾಗದೇ ತತ್ತರಿಸಿದ್ದರು. ಏತನ್ಮಧ್ಯೆ, ಕೇರಳದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾದ ಕಾರಣ ತುಂಬು ಗರ್ಭಿಣಿ ಸೇರಿದಂತೆ ಕಾರ್ಮಿಕರು ಕಣ್ಣೂರಿನಿಂದ ಸುಮಾರು 142 ಕಿ.ಮೀ ನ್ನು ಕಾಲ್ನಡಿಗೆಯಲ್ಲೇ ಧಾವಿಸಿ ಮಂಗಳೂರು ಸಮೀಪದ ತಲಪಾಡಿ ತಲುಪಿದ್ದಾರೆ