ಮಂಗಳೂರು: ಲಾಕ್‌ಡೌನ್ ಜಾರಿ ನಂತರ ಜಿಲ್ಲೆಯಾದ್ಯಂತ ನಿಯಮ ಉಲ್ಲಂಘಿಸಿದ ಆರೋಪದಡಿ ಅನೇಕ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದರು. ಲಾಕ್‌ಡೌನ್‌ಗೆ ಸ್ಪಂದಿಸದ ಯುವಕರಿಗೆ ಬಸ್ಕಿ, ಕಸಗೂಡಿಸುವ ಇನ್ನೊಮ್ಮೆ ನಿಯಮ ಉಲ್ಲಂಘಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿಸಿ ಎಚ್ಚರಿಕೆ ನೀಡಿ ಕಳುಹಿಸಿದ್ದರು.
ಆದರೆಶಾಸಕರಾದ ಯು.ಟಿ.ಖಾದರ್ ಮತ್ತು ಡಿ.ವೇದವ್ಯಾಸ ಕಾಮತ್ ದ್ವಿಚಕ್ರ ವಾಹನ ಏರಿ ನಗರದ ವಿವಿಧೆಡೆ ಭೇಟಿನೀಡಿ, ಲಾಕ್ ಡೌನ್ ಜಾರಿಯಲ್ಲಿರುವ ಕುರಿತು ಪರಿಶೀಲನೆ ನಡೆಸಿರುವುದು ಈಗ ಚರ್ಚೆಗೆ ಗ್ರಾಸವಾಗಿದ
ಲಾಕ್ ಡೌನ್ ಹೇರಿರುವುದೇ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು, ಆದರೆ ಶಾಸಕದ್ವಯರು ಇದನ್ನು ಮರೆತಂತೆ ಮೇಲ್ನೋಟಕ್ಕೆ ಕಂಡು ಬಂದಿದೆ. ಬೈಕ್ ನಲ್ಲಿ ಸಂಚಾರ ಮಾಡುವಾಗ ಒಬ್ಬರೇ ಸವಾರ ಮಾಡಬೇಕೆನ್ನುವ ನಿಯಮವಿದೆ. ಮತ್ತು ಅಗತ್ಯ ಸಮಯದಲ್ಲಿ ಮಾತ್ರ ಇಬ್ಬರು ಪ್ರಯಾಣಿಸಲು ಅವಕಾಶವಿದೆ. ಆದರೆ ಶಾಸಕರ ಭದ್ರತಾ ವಾಹನ ಹಿಂದೆಯೇ ಬರುತ್ತಿರುವಾಗ ಶಾಸಕರಿಗೆ ಬೈಕ್ ನಲ್ಲಿ ಪ್ರಯಾಣಿಸುವ ಅಗತ್ಯವೇನಿತ್ತು ? ಮತ್ತು ಸಾಮಾನ್ಯ ಜನತೆಗೆ ಒಂದು ಕಾನೂನು ಜನಪ್ರತಿನಿಧಿಗಳಿಗೆ ಒಂದು ಕಾನೂನಾ ? ಎಂಬುವುದು ಸಾರ್ವಜನಿಕರ ಪ್ರಶ್ನೆ.
ಜನರಿಗೆ ಮಾದರಿಯಾಗಿರಬೇಕಾದ ಚುನಾಯಿತ ಪ್ರತಿನಿಧಿಗಳು ಸಮಾಜಕ್ಕೆ ಒಂದು ಭಿನ್ನ ರೀತಿಯ ಸಂದೇಶ ರವಾನಿಸಿರುವುದು ಸುಳ್ಳಲ್ಲ..
ಸಾಮಾಜಿಕ ಬದ್ಧತೆಯ ಮರೆತರೆ ನಮ್ಮ ಜನಪ್ರತಿನಿಧಿಗಳು ?
- Advertisement -
- Advertisement -
- Advertisement -