Monday, June 8, 2026
Homeತಾಜಾ ಸುದ್ದಿಗರ್ಭಿಣಿ ಪತ್ನಿ ಮನೆಗೆ ವಾಪಸ್ ಬರದೇ ನಾಪತ್ತೆ; ರೀಲ್ಸ್ ನೋಡಿ ಯುವತಿಯನ್ನು ಪ್ರೀತಿಸಿ ಮದುವೆಯಾದ ಯುವಕನಿಗೆ...

ಗರ್ಭಿಣಿ ಪತ್ನಿ ಮನೆಗೆ ವಾಪಸ್ ಬರದೇ ನಾಪತ್ತೆ; ರೀಲ್ಸ್ ನೋಡಿ ಯುವತಿಯನ್ನು ಪ್ರೀತಿಸಿ ಮದುವೆಯಾದ ಯುವಕನಿಗೆ ಕಾದಿತ್ತು ಶಾಕ್!..

- Advertisement -
- Advertisement -

ದಾವಣಗೆರೆ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಗರ್ಭಿಣಿ ಪತ್ನಿಯ ನಾಪತ್ತೆ ಪ್ರಕರಣದ ವಿರುದ್ಧ ದೂರು ನೀಡಿದ್ದ ವ್ಯಕ್ತಿಯೋರ್ವನಿಗೆ ಆಕೆ 4 ಮದುವೆಯಾಗಿದ್ದಾಳೆ ಎನ್ನುವ ವಿಚಾರ ತಿಳಿದು ಶಾಕ್ ಆಗಿದ್ದಾನೆ.

2022ರಲ್ಲಿ ದಾವಣಗೆರೆ ವಾಸಿಯಾದ ಪ್ರಶಾಂತ್ ಅವರು ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ನರಹಳ್ಳಿ ಗ್ರಾಮದ ಯುವತಿಯೊಬ್ಬಳನ್ನು ಮದುವೆಯಾಗಿದ್ದರು. ಈ ಇಬ್ಬರಿಗೂ ಇನ್ ಸ್ಟಾಗ್ರಾಮ್‌ನಲ್ಲಿ ಪರಿಚಯವಾಗಿದ್ದು, ಪರಿಚಯ ಪ್ರೀತಿಗೆ ತಿರುಗಿ, ಹಿರಿಯರ ಸಮ್ಮುಖದಲ್ಲೇ ಮದುವೆಯಾಗಿ 3 ತಿಂಗಳುಗಳ ಕಾಲ ಸಂಸಾರನು ಮಾಡಿದ್ದರು. ಅದಾದ ಬಳಿಕ 3 ತಿಂಗಳ ಹಿಂದೆ ತವರು ಮನೆಗೆ ಹೋಗಿ ನಂತರ ಗರ್ಭಿಣಿ ಎಂದವಳು ಮನೆಗೆ ವಾಪಸ್ ಬಂದಿಲ್ಲ ಎಂದು ದೂರು ಇದೀಗ ಪತಿರಾಯ ದೂರು ನೀಡಿದ್ದಾನೆ.

ಇನ್ನು ಈ ವೇಳೆಗೆ ಯುವತಿಯ ಕುರಿತು ಕೆಲವೊಂದು ವಿಚಾರಗಳು ಪೊಲೀಸರಿಗೆ ತಿಳಿದಿದ್ದು, ಯುವತಿಯು ಬೇರೆ ಬೇರೆ ಹೆಸರನ್ನು ಇಟ್ಟುಕೊಂಡು ಮೂವರನ್ನು ಮದುವೆಯಾಗಿ ವಂಚಿಸಿದ ವಿಷಯ ತಿಳಿದು ಬಂದಿದೆ. ಮೈಸೂರು ಹತ್ತಿರದ ಬೆಳಗೊಳ ಬಳಿ ಒಬ್ಬರ ಜೊತೆ ಮದುವೆಯಾಗಿದ್ದು, ನಂತರದಲ್ಲಿ ದಾವಣಗೆರೆ ಪ್ರಶಾಂತ್ ಹಾಗೂ ಬೆಂಗಳೂರು ರಘು ಎಂಬವರನ್ನು ಮದುವೆಯಾಗಿ ವಂಚಿಸಿದ್ದಾಳೆ. ಇದೀಗ ಮಂಡ್ಯದ ಇನ್ನೊಬ್ಬ ಯುವಕನನ್ನು ಪ್ರೀತಿಸುತ್ತಿದ್ದಾಳೆ. ಆತನನ್ನು ಮದುವೆಯಾಗಿದ್ದಾಳೆ ಎಂದು ಆರೋಪ ಕೇಳಿ ಬಂದಿದೆ. ಇನ್ನು ಘಟನೆಯ ಕುರಿತು ಸ್ಪಷ್ಟನೆ ನೀಡಿರುವ ಪ್ರಶಾಂತ್, “ಮದುವೆಯಾಗಿ ವಂಚಿಸುವುದನ್ನು ಕಾಯಕ ಮಾಡಿಕೊಂಡಿರುವ ಆಕೆ ಇನ್‌ಸ್ಟಾಗ್ರಾಮ್ ರೀಲ್ಸ್‌ನಲ್ಲಿ ಎಕ್ಸ್‌ಪರ್ಟ್ ಆಗಿದ್ದು, ಹುಡುಗರನ್ನು ಯಾಮಾರಿಸುವ ಕೆಲಸ ಮಾಡುತ್ತಿದ್ದಾಳೆ,” ಎಂದು ತಿಳಿಸಿದ್ದಾರೆ. ಇನ್ನು ಈಗಾಗಲೇ ಈ ವಿಚಾರದ ಕುರಿತು ದೂರನ್ನು ನೀಡಿದ್ದಾರೆ.

- Advertisement -

Latest News

error: Content is protected !!