Monday, June 8, 2026
Homeತಾಜಾ ಸುದ್ದಿದೈವ-ದೇವರುಗಳಿಗೆ ಅವಹೇಳನ ಮಾಡುವವರಿಗೆ ತಕ್ಕ ಶಿಕ್ಷೆಯಾಗಬೇಕೆಂದು ಉಜಿರೆ ಅತ್ತಾಜೆ ಕೊರಗಜ್ಜ ಸನ್ನಿಧಿಯಲ್ಲಿ ಆರಾಧಕರಿಂದ ಪ್ರಾರ್ಥನೆ

ದೈವ-ದೇವರುಗಳಿಗೆ ಅವಹೇಳನ ಮಾಡುವವರಿಗೆ ತಕ್ಕ ಶಿಕ್ಷೆಯಾಗಬೇಕೆಂದು ಉಜಿರೆ ಅತ್ತಾಜೆ ಕೊರಗಜ್ಜ ಸನ್ನಿಧಿಯಲ್ಲಿ ಆರಾಧಕರಿಂದ ಪ್ರಾರ್ಥನೆ

- Advertisement -
- Advertisement -

ಉಜಿರೆ: ವಿಟ್ಲ ಕೊಳ್ನಾಡು- ಸಾಲೆತ್ತೂರು ಪ್ರದೇಶದಲ್ಲಿ ಅನ್ಯ ಧರ್ಮದವರು ಕೊರಗಜ್ಜ ದೈವದ ವೇಷ ಧರಿಸಿ ಅವಹೇಳನ ಮಾಡಿದ ಘಟನೆಯು ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆಯನ್ನುಂಟು ಮಾಡಿದೆ.

ದೈವ-ದೇವರುಗಳ ಫೇಸ್ಬುಕ್ ವಾಟ್ಸ್ಅಪ್ ಗಳಲ್ಲಿ ಅವಹೇಳನ ಮಾಡುವವರಿಗೆ ಈ ಎಲ್ಲ ಕೃತ್ಯಗಳನ್ನು ಖಂಡಿಸಿ ಇನ್ನು ಮುಂದೆ ಇಂತಹ ತಪ್ಪು ನಡೆಯಬಾರದು ಹಾಗೂ ತಪ್ಪು ಮಾಡಿದವರಿಗೆ ತಕ್ಕ ಶಿಕ್ಷೆಯಾಗಬೇಕೆಂದು ಉಜಿರೆ ಅತ್ತಾಜೆ ಕೊರಗಜ್ಜ ಸನ್ನಿಧಿಯಲ್ಲಿ ಆರಾಧಕರು ಶ್ರೀಮತಿ ಮತ್ತು ಶ್ರೀ ಶಂಕ್ರಪ್ಪ ಪೂಜಾರಿ ಮತ್ತು ಅವರ ಮನೆಯವರು ವಿಶ್ವ ಹಿಂದೂ ಪರಿಷತ್ ಬಜರಂಗದಳ ಬೆಳ್ತಂಗಡಿ, ಸಂಗಮ ಫ್ರೆಂಡ್ಸ್ ಇಜ್ಜಲ, ಛತ್ರಪತಿ ಶಿವಾಜಿ ಸೇವಾ ಟ್ರಸ್ಟ್ ಉಜಿರೆ, ವತಿಯಿಂದ ಉಜಿರೆ ಅತ್ತಾಜೆ ಸ್ವಾಮಿ ಕೊರಗಜ್ಜನಿಗೆ ಪ್ರಾರ್ಥನೆ ಸಲ್ಲಿಸಲಾಯಿತು.

- Advertisement -

Latest News

error: Content is protected !!