Monday, June 8, 2026
Homeಕರಾವಳಿಸುಳ್ಯ; ಶಾಫಿ ಬೆಳ್ಳಾರೆಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕೊಡದಂತೆ ಪ್ರವೀಣ್ ನೆಟ್ಟಾರು ಪೋಷಕರಿಂದ ಆಗ್ರಹ

ಸುಳ್ಯ; ಶಾಫಿ ಬೆಳ್ಳಾರೆಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕೊಡದಂತೆ ಪ್ರವೀಣ್ ನೆಟ್ಟಾರು ಪೋಷಕರಿಂದ ಆಗ್ರಹ

- Advertisement -
- Advertisement -

ಸುಳ್ಯ: ಈ ಬಾರಿಯ ಚುನಾವಣೆಯಲ್ಲಿ ಪುತ್ತೂರಿನಿಂದ ಸ್ಪರ್ಧಿಸಲು ಶಾಫಿ ಬೆಳ್ಳಾರೆಗೆ ಎಸ್ ಡಿ ಪಿ ಐ ಟಿಕೆಟ್ ಘೋಷಣೆ ಮಾಡಿದೆ. ಆದರೆ ಯಾವುದೇ ಕಾರಣಕ್ಕೂ ಶಾಫಿ ಬೆಳ್ಳಾರೆಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬಾರದು ಎಂದು ಪ್ರವೀಣ್‌ ನೆಟ್ಟಾರು ತಂದೆ ಶೇಖರ ಪೂಜಾರಿ, ತಾಯಿ ರತ್ನಾವತಿ ಆಗ್ರಹಿಸಿದ್ದಾರೆ.

ಆತ ಅನ್ಯಾಯವಾಗಿ ನಮ್ಮ ಮಗನನ್ನು ಕೊಂದ ಪಾಪಿ .ಯಾವುದೇ ಅಧಿಕಾರ ಇಲ್ಲದ ಸಂದರ್ಭ ಆತ ನಮ್ಮ ಮಗನನ್ನು ಕೊಂದ. ನಾಳೆ ಅಧಿಕಾರ ಪಡೆದ ಬಳಿಕ ಎಲ್ಲರನ್ನೂ ಕೊಲ್ಲುತ್ತಾನೆ. ನಮಗೆ ಮುಂದೆ ನಡೆದಾಡಲೂ ಸಾಧ್ಯವಿಲ್ಲ ಎಂದು ಆತಂಕ ಹೊರ ಹಾಕಿದ್ದಾರೆ.

ನಮಗೆ ಮನೆಯಿಂದ ಹೊರಗೆ ಹೋಗಲಾರದಂತ ಸ್ಥಿತಿಯನ್ನು ಶಾಫಿ ಬೆಳ್ಳಾರೆ ನಿರ್ಮಿಸಬಹುದು. ನಮ್ಮ ಮಗನನ್ನು ಕೊಂದು ನಮ್ಮನ್ನು ಈ ಸ್ಥಿತಿಗೆ ತಂದ ಆರೋಪಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಲೇಬಾರದು ಎಂದವರು ತಮ್ಮ ಆಕ್ರೋಶ ಹೊರಹಾಕಿದ್ದಾರೆ.

- Advertisement -

Latest News

error: Content is protected !!