Friday, June 5, 2026
Homeಕರಾವಳಿಏಪ್ರಿಲ್ 15ರೊಳಗೆ ಪ್ರವೀಣ್ ನೆಟ್ಟಾರು ಮನೆ ನಿರ್ಮಾಣ ಕಾಮಗಾರಿ ಪೂರ್ಣ

ಏಪ್ರಿಲ್ 15ರೊಳಗೆ ಪ್ರವೀಣ್ ನೆಟ್ಟಾರು ಮನೆ ನಿರ್ಮಾಣ ಕಾಮಗಾರಿ ಪೂರ್ಣ

- Advertisement -
- Advertisement -

ಸುಳ್ಯ;  ದುಷ್ಕರ್ಮಿಗಳಿಂದ ಹತ್ಯೆ ಬಿಜೆಪಿ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ, ದ.ಕ. ಸಂಸದ ನಳಿನ್‌ ಕುಮಾರ್‌ ಕಟೀಲ್‌ ಪಕ್ಷದ ವತಿಯಿಂದಲೇ ಮನೆ ನಿರ್ಮಿಸಿಕೊಡುವ ಭರವಸೆಯನ್ನು ನೀಡಿದ್ದರು. ಅದರಂತೆ ನ.2ರಂದು ಮನೆಗೆ ಶಂಕುಸ್ಥಾಪನೆ ನೆರವೇರಿತ್ತು.ಇದೀಗ ಮನೆ ನಿರ್ಮಾಣ ಕಾಮಗಾರಿ ಭರದಿಂದ ಸಾಗುತ್ತಿದ್ದು ಏಪ್ರಿಲ್ ವೇಳೆಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎನ್ನಲಾಗಿದೆ.

 ಸುಮಾರು 50 ಲಕ್ಷ ರು. ವೆಚ್ಚದ, 2,700 ಚದರ ಅಡಿ ವಿಸ್ತೀರ್ಣದ ಮನೆಯ ವಿನ್ಯಾಸ ಹಾಗೂ ಗುತ್ತಿಗೆಯನ್ನು ಮಂಗಳೂರಿನ ಮುಗೆರೋಡಿ ಕನ್‌ಸ್ಟ್ರಕ್ಷನ್‌ ವಹಿಸಿದೆ. ಈಗಾಗಲೇ ಭರದಿಂದ ಮನೆ ಕಾಮಗಾರಿ ನಡೆಸಲಾಗುತ್ತಿದ್ದು, ಜೂನ್‌ ಮಳೆಗಾಲದೊಳಗೆ ಮನೆಯ ಪ್ರವೇಶೋತ್ಸವನ್ನು ಮಾಡಲಿದ್ದಾರೆ. ಮನೆಯ ಮಗನನ್ನು ಕಳೆದುಕೊಂಡ ಕುಟಂಬಸ್ಥರು ಸದಾ ದುಃಖದ ಮಡುವಿನಲ್ಲೆ ಕಾಲ ಕಳೆಯುತ್ತಿದ್ದಾರೆ. ಆದಗೂ ಇದೀಗಕೊಂಚ ಮಟ್ಟಿಗೆ ಮಗ ಪ್ರವೀಣ್‌ ನೆಟ್ಟಾರು ಹೆಸರಲ್ಲೇ ಮನೆ ನಿರ್ಮಾಣವಾಗುತ್ತಿರೋದು ಕೊಂಚ ನೆಮ್ಮದಿ ತರಿಸಿದೆ.

- Advertisement -

Latest News

error: Content is protected !!