Friday, June 27, 2025
Homeತಾಜಾ ಸುದ್ದಿದರ್ಶನ್ ಮಾನಸಿಕ ಅಸ್ವಸ್ಥೆಯಿಂದ ಬಳಲುತ್ತಿದ್ದಾರೆ; ಡಿ ಬಾಸ್ ವಿರುದ್ಧ ಮತ್ತೊಂದು ಸ್ಫೋಟಕ ಪೋಸ್ಟ್ ಹಾಕಿದ ಪ್ರಶಾಂತ್...

ದರ್ಶನ್ ಮಾನಸಿಕ ಅಸ್ವಸ್ಥೆಯಿಂದ ಬಳಲುತ್ತಿದ್ದಾರೆ; ಡಿ ಬಾಸ್ ವಿರುದ್ಧ ಮತ್ತೊಂದು ಸ್ಫೋಟಕ ಪೋಸ್ಟ್ ಹಾಕಿದ ಪ್ರಶಾಂತ್ ಸಂಬರಗಿ

spot_img
- Advertisement -
- Advertisement -

ಬೆಂಗಳೂರು;  ದರ್ಶನ್ ಅರೆಸ್ಟ್ ಆದಾಗಿನಿಂದಲೂ ಸಾಮಾಜಿಕ ಹೋರಾಟಗಾರ, ಮಾಜಿ ಬಿಗ್ ಬಾಸ್ ಸ್ಪರ್ಧಿ ಪ್ರಶಾಂತ್ ಸಂಬರಗಿ ಡಿ ಬಾಸ್ ವಿರುದ್ಧ ಪೋಸ್ಟ್ ಗಳನ್ನು ಹಾಕುತ್ತಲೇ ಇದ್ದಾರೆ. ಇದೀಗ ಮತ್ತೊಂದು ಪೋಸ್ಟ್ ಹಾಕಿದ್ದು ದರ್ಶನ್ ಮಾನಸಿಕ ಅಸ್ವಸ್ಥ ಎಂದಿದ್ದಾರೆ.

ದರ್ಶನ ಕರ್ಮ ಕಾಂಡ Part 4 ಎಂದು ಬರೋದು ಪೋಸ್ಟ್ ಹಾಕಿರುವ ಅವರು ಸೈಕೋ ಮುಲಾಮ್ ರಾಜಾ.ರೇಣುಕಾ ಸ್ವಾಮಿಗೆ ನ್ಯಾಯ ಸಿಗಲಿ.ಡಿ ಬಾಸ್ IED ಎಂಬ ಮಾನಸಿಕ ಅಸ್ವಸ್ಥತೆಯಿಂದ ಬಳತಾ ಇದ್ದಾನೆ. (Intermittent Explosive Disorder).

ಕನ್ನಡದಲ್ಲಿ ಈ ಮಾನಸಿಕ ಕಾಯಿಲೆ ಮರುಕಳಿಸುವ ಸ್ಫೋಟಕ ಅಸ್ವಸ್ಥತೆ ಅಂತ ಕರೀತಾರೆ.ನಿಂದನೀಯ, ಆಕ್ರಮಣಕಾರಿ ಮತ್ತು ಹಿಂಸ್ಮಾಕರಾದ ಪ್ರವೃತಿ ಈ ಕಾಯಿಲೆಯ ಲಕ್ಷಣ ಇನ್ನು ಈ ಸ್ಥಿತಿನಲ್ಲಿ ಇವನು ಕುಡಿದು ಮಾದಕ ಸೇವನೆ ಮಾಡಿದಾಗ ಇವನ ಕೈಗೆ ಸಿಕ್ಕಾಡ್ಕೊಂಡ್ಬಿಟ್ರೆ ಶತ ಕೋಟಿ ದೇವರುಗಳು ಬಡಪಾಯಿಗಳನ್ನ ಉಳಿಸಕ್ಕೆ ಆಗಲ್ಲ.

ಫ್ರೆಂಡ್ಸ್ ನೀವು ಗಮನಿಸಿ ಈ ಸೈಕೋ ವ್ಯಕ್ತಿ ಯ ಎಲ್ಲಾ ಟಿವಿ ಸಂದರ್ಶನಗಳು ಮತ್ತು ಸಾರ್ವಜನಿಕ ಜಾಲತಾಣ ದಲ್ಲಿ ಲಭ್ಯವಿರುವ ಫೋಟೋಗಳನ್ನು ಸರಿಯಾಗಿ ಗಮನಿಸಿ ,ಇವನ ಬಲಗೈ ನಲ್ಲಿ ಬ್ಯಾಂಡೇಜ್ ಇರತ್ತೆ ,ಯಾಕೆ ಅಂದ್ರೆ ಇವನ ಹಿಂದಿನ ರಾತ್ರಿ ಯಾರೋ ಬಡಪಾಯಿಗೆ ಇವನ ವಿಶ್ವ ರೂಪ ನೋಡಿಸಿರ್ತಾನೆ.

ಇವನ ಈ ವಿಚಿತ್ರ ನಡವಳಿಕೆ, ರೌಡಿಸಿಮ್ ಕೃತ್ಯಗಳು,ಅನೇಕರ ಮೇಲೆ ಹಲ್ಲೆಗಳು ಎಷ್ಟೋ ಜನರು ನೋಡಿದ್ದರೆ ,ಈ ಹಿಂಸಾ ಕೃತ್ಯವನ್ನು ಹಲವಾರು ಬಾರಿ ಪೊಲೀಸ್ ದೂರಿನ ಮೂಲಕ ದಾಖಲಿಸಲಾಗಿದೆ ಮತ್ತು ಈ ರಾಕ್ಷಸನಿಂದ ಹಲ್ಲೆ ಮತ್ತು ನಿಂದನೆಗೊಳಗಾದ ಜನರ ಪಟ್ಟಿ ದಿನ ದಿನಕ್ಕೆ ಹನುಮಂತನ ಬಾಲ ತರ ಬೆಳಿತಾಯಿದೆ.

ಇನ್ನೊಂದು ಈ ಸೈಕೋದ ವಿಚಿತ್ರ ನಡವಳಿಕೆ ಗೊತ್ತಾ?

ಹೇಳ್ತಿನಿ ಕೇಳಿ ಮಾಡೋದಲ್ಲ ಮಾಡ್ಬಿಟ್ಟು ಇವನು ಮರುದಿನ ಬೆಳಿಗ್ಗೆ ತನ್ನ ಕೊಳಕು ವರ್ತನೆಗೆ ಪಶ್ಚಾತ್ತಾಪ ಮಾಡ್ಕೊಂಡು ಅವನೇ ಖುದ್ದಾಗಿ ಹಲ್ಲೆ ಮಾಡಿದ ಬಲಿಪಶುವಿಗೆ ಮುಲಾಮು ಹಚ್ತಾನಂತೆ ಈ ಮುಲಾಮು ರಾಜಾ ,ಮತ್ತೆ ರಾತ್ರಿಯಲ್ಲಿ ಅದೇ ಕ್ರೂರ ದಾಳಿಯನ್ನು ಪುನರಾವರ್ತಿಸುತ್ತಾನೆ.

Dasa is psyco he needs treatment.

ಇವಾಗ ನೀವೇ ಹೇಳಿ ಇವನ್ನನ ಬಿಡಬೇಕಾ?.

ಒಂದ್ angle ನಲ್ಲಿ ನೋಡಿದ್ರೆ ಪಾಪ ಅನ್ಸತ್ತೆ.Dasa needs treatment. ಎಂದು ಪೋಸ್ಟ್ ಮಾಡಿದ್ದಾರೆ.

- Advertisement -
spot_img

Latest News

error: Content is protected !!