Saturday, June 6, 2026
Homeಕರಾವಳಿಕಂಬಳ ಓಟಗಾರ ಶ್ರೀನಿವಾಸ್ ಗೌಡಗೆ ಬೆದರಿಕೆ ಹಾಕಿದ ಪ್ರಕರಣ :ಶ್ರೀರಾಮಸೇನೆಯ ಕಾರ್ಯಕರ್ತ ಪ್ರಶಾಂತ್ ಬಂಗೇರ ಅರೆಸ್ಟ್

ಕಂಬಳ ಓಟಗಾರ ಶ್ರೀನಿವಾಸ್ ಗೌಡಗೆ ಬೆದರಿಕೆ ಹಾಕಿದ ಪ್ರಕರಣ :ಶ್ರೀರಾಮಸೇನೆಯ ಕಾರ್ಯಕರ್ತ ಪ್ರಶಾಂತ್ ಬಂಗೇರ ಅರೆಸ್ಟ್

- Advertisement -
- Advertisement -

ಮಂಗಳೂರು: ಉಸೆನ್ ಬೋಲ್ಟ್ ಖ್ಯಾತಿಯ ಕಂಬಳದ ಓಟಗಾರ ಶ್ರೀನಿವಾಸ್ ಗೌಡಗೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಶ್ರೀರಾಮ ಸೇನೆಯ ಕಾರ್ಯಕರ್ತ ಪ್ರಶಾಂತ್ ಬಂಗೇರ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ತನಗೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶ್ರೀನಿವಾಸ ಗೌಡ ಅವರು ಮೂಡಬಿದರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅಲ್ಲದೇ ಬೆಂಗಳೂರಿನಲ್ಲಿ ಕಂಬಳ ಪ್ರೇಮಿಗಳು ಶ್ರೀನಿವಾಸ ಗೌಡ ಅವರಿಗೆ ಬೆದರಿಕೆ ಹಾಕಿದ ಪ್ರಶಾಂತ್ ಬಂಗೇರ ನನ್ನು ಬಂಧಿಸಿಬೇಕು ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಒತ್ತಾಯಿಸಿದ್ದರು. ಅದರಂತೆ ಇದೀಗ ಪ್ರಶಾಂತ್ ಬಂಗೇರ ಬಂಧನವಾಗಿದೆ.

ಇನ್ನು ಪ್ರಶಾಂತ್ ಬಂಗೇರ ಶ್ರೀನಿವಾಸ ಗೌಡ ಅವರಿಗೆ ಬೆದರಿಕೆ ಹಾಕಿರುವ ಆಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

- Advertisement -

Latest News

error: Content is protected !!