Monday, June 30, 2025
Homeಕರಾವಳಿಉಡುಪಿಬಿಜೆಪಿ ಸೇರ್ಪಡೆ ಬಗ್ಗೆ ನನ್ನ ಬಳಿಯೇ ಮಾಹಿತಿ ಇಲ್ಲ: ಮಾಜಿ ಸಚಿವ ಪ್ರಮೋದ್ ಮಧ್ವರಾಜ್...

ಬಿಜೆಪಿ ಸೇರ್ಪಡೆ ಬಗ್ಗೆ ನನ್ನ ಬಳಿಯೇ ಮಾಹಿತಿ ಇಲ್ಲ: ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿಕೆ

spot_img
- Advertisement -
- Advertisement -

ಉಡುಪಿ : ಮಾಜಿ ಸಚಿವ ಪ್ರಮೋಜ್ ಮಧ್ವರಾಜ್ ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದಾರೆ ಎನ್ನುವ ಕೆಲವು ದಿನಗಳಿಂದ ಸುದ್ದಿಗಳು ಹರಿದಾಡುತ್ತಿವೆ. ಈ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪ್ರಮೋದ್ ಮಧ್ವರಾಜ್, ಈ ಬಗ್ಗೆ ನನ್ನ ಬಳಿಯೇ ಮಾಹಿತಿ ಇಲ್ಲ. ಗೊತ್ತಾದರೆ ನಿಮಗೆ ತಿಳಿಸುತ್ತೇನೆ ಎಂದಿದ್ದಾರೆ.

ಮಲ್ಪೆಯಲ್ಲಿ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪತ್ರಿಕಾಗೋಷ್ಠಿ ಕರೆಯದೆ, ಮಾಧ್ಯಮದವರ ಜೊತೆ ಮಾತನಾಡದೆ ತುಂಬಾ ವರ್ಷಗಳಾಗಿವೆ.ಅತೀ ಶೀಘ್ರದಲ್ಲೇ ಮಾತನಾಡುತ್ತೇನೆ. ನನ್ನ ಪರ ಹಾಗೂ ವಿರೋಧವಾಗಿ ಚರ್ಚೆ ಮಾಡುತ್ತಿರುವುದು ಇದು ಹೊಸದಲ್ಲ. ಹಳೆಯ ಪ್ರಕ್ರಿಯೆ ಈಗಲೂ ಮುಂದುವರೆಯುತ್ತಿದೆ ಎಂದರು.

ನನ್ನ ಬಗ್ಗೆ ಚರ್ಚೆಗೆ ಯಾರು ಕಾರಣ ಎಂಬುದು ನನಗೆ ಗೊತ್ತಿಲ್ಲ. ನನ್ನ ಬಗ್ಗೆ ಚರ್ಚೆ ನಡೆಯುತ್ತಿರುವುದಕ್ಕೆ ನಾನು ಸಂತೋಷ ಪಡುತ್ತಿದ್ದೇನೆ. ಬದಲು ಅದಕ್ಕಾಗಿ ದುಃಖ ಪಡುವುದಾಗಲೀ ಇನ್ನೊಬ್ಬರನ್ನು ದೂರುವುದಾಗಲೀ ಮಾಡುವುದಿಲ್ಲ. ನನ್ನ ಮುಂದಿನ ರಾಜಕೀಯ ದೇವರು ನಡೆಸಿದಂತೆ ಆಗುತ್ತದೆ ಎಂದು ಹೇಳಿದ್ದಾರೆ.

- Advertisement -
spot_img

Latest News

error: Content is protected !!