Thursday, June 27, 2024
Homeತಾಜಾ ಸುದ್ದಿಪೆನ್ ಡ್ರೈವ್ ಕ್ಯಾಂಡಿಡೇಟ್ ಗೆ ಮುಟ್ಟಿ ನೋಡಿಕೊಳ್ಳುವಂತೆ ಏಟು ಕೊಟ್ಟ ಹಾಸನದ ಜನ; ಪ್ರಜ್ವಲ್ ರೇವಣ್ಣಗೆ...

ಪೆನ್ ಡ್ರೈವ್ ಕ್ಯಾಂಡಿಡೇಟ್ ಗೆ ಮುಟ್ಟಿ ನೋಡಿಕೊಳ್ಳುವಂತೆ ಏಟು ಕೊಟ್ಟ ಹಾಸನದ ಜನ; ಪ್ರಜ್ವಲ್ ರೇವಣ್ಣಗೆ ಹೀನಾಯ ಸೋಲು

spot_img
- Advertisement -
- Advertisement -

ಹಾಸನ: ತೀವ್ರ ಕುತೂಹಲ ಕೆರಳಿಸಿದ್ದ ಕ್ಷೇತ್ರಗಳಲ್ಲಿ ಒಂದಾದ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ತೀವ್ರ ಮುಖಭಂಗವಾಗಿದೆ.ಪೆನ್ ಡ್ರೈವ್ ಕೇಸ್ ನಲ್ಲಿ ಎಸ್ ಐಟಿ ವಶದಲ್ಲಿರುವ ಪ್ರಜ್ವಲ್ ಗೆ ಜನ ಮುಟ್ಟಿ ನೋಡಿಕೊಳ್ಳುವಂತೆ ಏಟು ಕೊಟ್ಟಿದ್ದಾರೆ.

25 ವರ್ಷಗಳಿಂದ ಜೆಡಿಎಸ್ ಭದ್ರ ಕೋಟೆಯಾಗಿದ್ದ ಹಾಸನದಲ್ಲಿ ಈ ಬಾರಿ  ಕಾಂಗ್ರೆಸ್ ಅಭ್ಯರ್ಥಿಗೆ ಭರ್ಜರಿ ಗೆಲುವು ಸಿಕ್ಕಿದೆ. ಮತಏಣಿಕೆಯ 18ನೇ ಸುತ್ತಿನಲ್ಲಿ, ಹಾಸನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ 6,64,848 ಮತಗಳನ್ನು ಪಡೆದಿದ್ದರು. ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರು, 6,21,255 ಮತಗಳನ್ನು ಪಡೆದಿದ್ದರು. ಬರೋಬ್ಬರಿ 43,588 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಗೆಲುವು ಸಾಧಿಸಿದ್ದಾರೆ.

ಅಂದಹಾಗೇ ಹಾಸನ ಲೋಕಸಭಾ ಕ್ಷೇತ್ರದ 2024ರ ಚುನಾವಣೆಯಲ್ಲಿ 13,48,966 ಮತಗಳು ಚಲಾವಣೆಯಾಗಿದ್ದವು. ಇದುವರೆಗೆ 13,28,820 ಮತಗಳ ಏಣಿಕೆ ಕಾರ್ಯ ಪೂರ್ಣಗೊಂಡಿದೆ. ಇನ್ನೂ ಕೇವಲ 26,146 ಮತಗಳ ಏಣಿಕೆ ಮಾತ್ರವೇ ಬಾಕಿ ಉಳಿದಿದೆ. ಇದರಲ್ಲಿ 42,187 ಮತಗಳ ಅಂತರವನ್ನು ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಕಾಯ್ದುಕೊಂಡಿದ್ದು, ಗೆಲುವಿನ ನಗೆ ಬೀರಿದ್ದಾರೆ.

- Advertisement -
spot_img

Latest News

error: Content is protected !!