Wednesday, June 3, 2026
Homeತಾಜಾ ಸುದ್ದಿಲೋಕಸಭಾ ಚುನಾವಣೆಗೆ ಹಾಸನ ಕ್ಷೇತ್ರದಿಂದ ಪ್ರಜ್ವಲ್ ರೇವಣ್ಣ ಸ್ಪರ್ಧೆ; ಖಚಿತ ಪಡಿಸಿದ ಮಾಜಿ ಮುಖ್ಯಮಂತ್ರಿ ಎಚ್...

ಲೋಕಸಭಾ ಚುನಾವಣೆಗೆ ಹಾಸನ ಕ್ಷೇತ್ರದಿಂದ ಪ್ರಜ್ವಲ್ ರೇವಣ್ಣ ಸ್ಪರ್ಧೆ; ಖಚಿತ ಪಡಿಸಿದ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ

- Advertisement -
- Advertisement -

ಹಾಸನ : ಲೋಕಸಭಾ ಚುನಾವಣೆಗೆ ಹಾಸನ ಕ್ಷೇತ್ರದಿಂದ ಪ್ರಜ್ವಲ್ ರೇವಣ್ಣ ಸ್ಪರ್ಧೆ ಮಾಡೋದು ಖಚಿತ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡಿರುವುದು ಪಕ್ಷ ಮುಗಿಸಲು ಅಲ್ಲ. ಪಾತಾಳಕ್ಕೆ ಬಿದ್ದಿದ್ದೇವೆ ಮೇಲೆ ಎದ್ದೇಳಬೇಕಲ್ಲ ಎಂದಿದ್ದಾರೆ.

ಹಾಸನ ಮಂಡ್ಯ ಕೋಲಾರ ಕ್ಷೇತ್ರ ಜೆಡಿಎಸ್ ಪಾಲಿಗೆ ಎಂದು ಅವರು ತಿಳಿಸಿದ್ದಾರೆ. ಈ ವೇಳೆ ಭಾವುಕರಾಗಿ ಮಾತನಾಡಿದ ಅವರು ಜೆಡಿಎಸ್ ಪಕ್ಷವನ್ನು ಉಳಿಸಿ . ನಾನು ಅಷ್ಟು ಬೇಗ ಸಾಯಲ್ಲ ನಿಮ್ಮ ಜೊತೆ ಇರುತ್ತೇನೆ ಭಗವಂತ ನನಗೆ ಆಯಸ್ಸು ಕೊಡುತ್ತಾನೆ ಎಂದರು,

ಹಾಸನದಿಂದ ಪ್ರಜ್ವಲ್ ರೇವಣ್ಣ ಸ್ಪರ್ಧೆ ಮಾಡುತ್ತಾರೆ. ಹಾಸನದಲ್ಲಿ ಮತ್ತೊಮ್ಮೆ ನೀವು ಪರೀಕ್ಷೆಗಳಿಗೆ ಆಶೀರ್ವದಿಸಿ ಅವನು ರೇವಣ್ಣನ ಮಗ ನನ್ನ ಮಗ ಅವನಲ್ಲಿ ಹಾಗೂ ಕ್ಷೇತ್ರದಲ್ಲಿ ಬದಲಾವಣೆ ತರುತ್ತೇನೆ. ಹಾಸನ ಮಂಡ್ಯ ಕೋಲಾರ ಕ್ಷೇತ್ರವನ್ನು ನಮಗೆ ಕೊಡಲು ತೀರ್ಮಾನಿಸಿದ್ದಾರೆ ಎಂದರು.

- Advertisement -

Latest News

error: Content is protected !!