Saturday, June 6, 2026
Homeತಾಜಾ ಸುದ್ದಿನಟ ಪ್ರಭುದೇವ್ ಮನಗೆದ್ದ ಹುಡುಗಿ ಯಾರು? ಕೈಲಿದ್ದ ನಯನತಾರ ಟ್ಯಾಟೂ ಮರೆಯಾದದ್ದೇಕೆ?

ನಟ ಪ್ರಭುದೇವ್ ಮನಗೆದ್ದ ಹುಡುಗಿ ಯಾರು? ಕೈಲಿದ್ದ ನಯನತಾರ ಟ್ಯಾಟೂ ಮರೆಯಾದದ್ದೇಕೆ?

- Advertisement -
- Advertisement -

ಮುಂಬೈ: ಮಾಸ್ಟರ್ ಡ್ಯಾನ್ಸರ್ ಹಾಗು ನಟ ಪ್ರಭುದೇವ ವಿಚ್ಛೇದನದ ನಂತರ ಮದುವೆಯಾಗಲಿದ್ದಾರೆ ಎಂಬ ವಿಚಾರ ಹಲವು ದಿನಗಳಿಂದ ಸಿನಿ ಅಂಗಳ ಹಾಗೂ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಸುದ್ದಿ ಮಾಡಿತ್ತು. ನಟ ತನ್ನ ಬೆನ್ನು ನೋವಿಗೆ ಚಿಕಿತ್ಸೆ ನೀಡಿದ ವೈದ್ಯೆಯನ್ನೇ ಪ್ರೀತಿಸಿ ಮದುವೆಯಾಗುತ್ತಿದ್ದಾರೆ. ಈಗಾಗಲೇ ಎರಡು ತಿಂಗಳಿಂದ ಪ್ರಭುದೇವ ಹಾಗೂ ಡಾ.ಹಿಮಾನಿ ಲಿವ್‌ ಇನ್‌ ರಿಲೇಷನ್‌ಶಿಪ್‌ನಲ್ಲಿದ್ದು ಮುಂದಿನ ವರ್ಷ ಮೇ ತಿಂಗಳಲ್ಲಿ ವಿವಾಹ ನಡೆಯಲಿದೆ

ಪ್ರಭುದೇವ ಮನೆಯಲ್ಲಿಯೇ ನಡೆಯಲಿರುವ ವಿವಾಹದಲ್ಲಿ ಆಪ್ತರು ಮಾತ್ರ ಭಾಗವಹಿಸಲಿದ್ದಾರೆ. ಈ ಹಿಂದೆ ನಟಿ ನಯನತಾರ ಜೊತೆ ಲಿವ್‌ ಇನ್‌ ರಿಲೇಷನ್‌ಶಿಪ್‌ನಲ್ಲಿದ್ದ ಪ್ರಭುದೇವ್ ಈಗ ಮದುವೆಗೆ ಮನಸ್ಸು ಮಾಡಿದ್ದು ನಯನತಾರ ಟ್ಯಾಟೂ ಕೈನಿಂದ ಮರೆಯಾಗಿದೆ. ಡಾಕ್ಟರ್ ಕೈ ಹಿಡಿಯಲಿರುವ ನಟನಿಗೆ ಸಿನಿರಂಗ ಶುಭಾಶಯ ಹೇಳುತ್ತಿದೆ.

- Advertisement -

Latest News

error: Content is protected !!