Saturday, June 6, 2026
Homeಕರಾವಳಿಉಡುಪಿಕೋಟ: ಕಸಕ್ಕೆ ಬೆಂಕಿ ಹಾಕುವ ಸಂದರ್ಭ ವೃದ್ದೆ ಅಗ್ನಿಗಾಹುತಿ!..

ಕೋಟ: ಕಸಕ್ಕೆ ಬೆಂಕಿ ಹಾಕುವ ಸಂದರ್ಭ ವೃದ್ದೆ ಅಗ್ನಿಗಾಹುತಿ!..

- Advertisement -
- Advertisement -

ಕೋಟ:ಇಲ್ಲಿನ ಮಣೂರು ಜಟ್ಟಿಗೇಶ್ವರದ ಸಮೀಪದಲ್ಲಿ ಕಸಕ್ಕೆ ಬೆಂಕಿ ಹಾಕುವ ಸಂದರ್ಭ ಸೀರೆಗೆ ಬೆಂಕಿ ತಾಗಿ ವೃದ್ದೆಯೋರ್ವರು ಅಗ್ನಿಗಾಹುತಿಯಾದ ಘಟನೆ ವರದಿಯಾಗಿದೆ.ಮೃತ ವೃದ್ಧೆಯನ್ನು ಮಣೂರು ಜಟ್ಟಿಗೇಶ್ವರದ ನಿವಾಸಿ ಬಾಗಿ (68) ಎಂದು ಗುರುತಿಸಲಾಗಿದೆ.

ಬೆಳಿಗ್ಗೆ ವೃದ್ದೆಯು ತನ್ನ ಮನೆಯ ವಠಾರದಲ್ಲಿದ್ದ ಕಸಗಟ್ಟಿಗಳನ್ನು ಒಗ್ಗೂಡಿಸಿ ಬೆಂಕಿ ಹಾಕುವ ವೇಳೆಆಕೆಯ ಸೀರೆಗೆ ಬೆಂಕಿ ತಾಗಿ ಈ ಅವಘಡ ನಡೆದಿದೆ. ಆಘಾತದಿಂದ ವೃದ್ದೆಗೆ ತಲೆ ತಿರುಗಿದ್ದು ಬೆಂಕಿಯ ರಾಶಿಗೆ ಬಿದ್ದಿದ್ದಾರೆ.ಆಕೆಯನ್ನು ಮಣಿಪಾಲದ ಖಾಸಗಿ ಆಸ್ಪತ್ರೆ ದಾಖಲಿಸಿದರು ಚಿಕೆತ್ಸೆ ಫಲಕಾರಿಯಾಗದೆ ಆಕೆ ಸಾವನ್ನಪ್ಪಿದ್ದಾರೆ.

- Advertisement -

Latest News

error: Content is protected !!