Thursday, June 4, 2026
Homeಕರಾವಳಿಬೆಳ್ತಂಗಡಿ: ಅಲ್ಯುಮಿನಿಯಂ ದೋಟಿ ವಿದ್ಯುತ್ ತಂತಿಗೆ ತಾಗಿ ಮೂವರು ಮಕ್ಕಳಿಗೆ ಗಾಯ

ಬೆಳ್ತಂಗಡಿ: ಅಲ್ಯುಮಿನಿಯಂ ದೋಟಿ ವಿದ್ಯುತ್ ತಂತಿಗೆ ತಾಗಿ ಮೂವರು ಮಕ್ಕಳಿಗೆ ಗಾಯ

- Advertisement -
- Advertisement -

ಬೆಳ್ತಂಗಡಿ: ಅಲ್ಯುಮಿನಿಯಂ ದೋಟಿ ತೆಗೆದುಕೊಂಡು ಹೋಗುತ್ತಿದ್ದಾಗ ಅದು ವಿದ್ಯುತ್ ತಂತಿಗೆ ತಾಗಿ ಮೂವರು ಮಕ್ಕಳು ಗಾಯಗೊಂಡ ಘಟನೆ ಶನಿವಾರ ಚಾರ್ಮಾಡಿಯಲ್ಲಿ ನಡೆದಿದೆ.

ಇಮ್ತಿಯಾಜ್ ಅವರ ಮಕ್ಕಳಾದ ಮಹಮ್ಮದ್‌ ಆಲಿ (16), ಮಹಮ್ಮದ್‌ ಇನಾಜ್‌ (8) ಹಾಗೂ ಹನೀಫ್‌ ಅವರ ಪುತ್ರ ಅಯ್ನಾನ್‌ (6) ಗಾಯಗೊಂಡವರು.

ಸ್ಥಳೀಯರು ಕೂಡಲೇ ಮಕ್ಕಳನ್ನು ಕಕ್ಕಿಂಜೆ ಹಾಗೂ ಉಜಿರೆಯ ಖಾಸಗಿ ಆಸ್ಪತ್ರೆಗೆ ಕೊಂಡೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಕ್ಕಳು ಸುಟ್ಟ ಗಾಯಗಳಿಗೆ ಒಳಗಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ.

- Advertisement -

Latest News

error: Content is protected !!